YOUNIVERSE presents "Mukha Mukhi"
ಸೌರಮಂಡಲದಲ್ಲಿರುವ ಈ ಭೂಮಿಯೆಂಬ ಅಪರೂಪದ ಗ್ರಹದ ಇತಿಹಾಸದಲ್ಲಿ ಮನುಷ್ಯನೆಂಬ ವಿಶಿಷ್ಟ ಜೀವಿಯ ವಿಕಾಸದ ಹಾದಿಯನ್ನು ಗಮನಿಸಿದಾಗ, ಸಾವಿರಾರು ವರುಷಗಳಲ್ಲಿ ಮನುಷ್ಯನ ಯಾವ ತಲೆಮಾರಿಗೂ ಸಿಗದ ಸವಲತ್ತುಗಳು, ಸೌಲಭ್ಯಗಳು,ಆವಿಷ್ಕಾರಗಳು, ಚಿಂತನಾಶಕ್ತಿ ಇಂದಿನ ತಲೆಮಾರಿಗೆ ಸಿಕ್ಕಿದೆ. ಆದರೆ ಈ ವಿಕಾಸಗಳ ಮೂಲ ಉದ್ದೇಶವಾದ ಸಂತೋಷದಿಂದ ಮನುಷ್ಯ ವಂಚಿತನಾಗಿದ್ದಾನೆ. ಬದಲಿಗೆ ಮೊದಲಿಗಿಂತಲೂ ಹೆಚ್ಚು ಸಂಧಿಗ್ಧತೆಯಲ್ಲಿದ್ದಾನೆ, ಒತ್ತಡದಲ್ಲಿದ್ದಾನೆ. ಮನುಷ್ಯನ ಆನಂದಕ್ಕೆ ಕಾರಣವಾಗಬೇಕಿದ್ದ ಅವನ ಮೆದುಳಿನ ವಿಕಾಸ ಒಂದು ಪೀಡೆಯಾಗಿ ಪರಿಣಮಿಸಿದೆ. ತನ್ನೊಳಗಿರುವ ವಿದ್ಯುತ ತರಂಗಗಳಿಗೆ ಸಿಲುಕಿ ನಲುಗುತ್ತಿರುವ ಮನುಷ್ಯ, ಅದೇ ವಿದ್ಯುತ್ತನ್ನು ಬೆಳಕಾಗಿಸುವ ಸಾಧ್ಯತೆಯನ್ನು ನಾಟಕ ಮುಂದಿಡುತ್ತದೆ.
ಪ್ರಸ್ತುತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಂಗ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿ ಗ್ರಾಮದ ಹತ್ತಿರದ ಹೊಸೂರಿನವರಾದ ಸ್ವರೂಪ್ ಕುಮಾರ್ ರವರು 2013ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭವಾದ ಮಲೆಗಳಲ್ಲಿ ಮದುಮಗಳು ನಾಟಕದ ಮೂಲಕ ರಂಗಪ್ರವೇಶ ಮಾಡಿರುತ್ತಾರೆ. ರಂಗ ನಿರ್ದೇಶಕರುಗಳಾದ ಸಿ.ಬಸವಲಿಂಗಯ್ಯ, ಶ್ರೀಪಾದ್ ಭಟ್, ಯತೀಶ್ ಕೊಳ್ಳೇಗಾಲ, ಚೆನ್ನಕೇಶವ, ಎಂಸಿ.ರಾಮು, ಶಂಕರ್ ಗಂಟಿ,ಹಾಗೂ ಹಲವಾರು ರಂಗಕರ್ಮಿಗಳೊಂದಿಗೆ ನಿರಂತರವಾಗಿ ಕಲಾವಿದರಾಗಿ, ತಂತ್ರಜ್ಞರಾಗಿ, ಸಂಘಟಕರಾಗಿ ಕೆಲಸ ಮಾಡಿದ್ದಾರೆ.
ಡಾ ಶ್ರೀಪಾದ ಭಟ್ ನಿರ್ದೇಶನದ ಗಾಂಧಿ-150 ಸ್ಮರಣೆಯ ಪಾಪು ಬಾಪು ನಾಟಕದಲ್ಲಿ ನಟರಾಗಿ, ಸಂಘಟಕರಾಗಿ, ನಾಡಿನಾದ್ಯಂತ ಶಾಲಾ-ಕಾಲೇಜುಗಳು, ಸಾರ್ವಜನಿಕ ಪ್ರದರ್ಶನಗಳು ಸೇರಿ ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ.
ಪ್ರಸ್ತುತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಂಗ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.”
Team : universe
Play : mukha- mukhi Actor's : swaroop-modren man (Witter,director)
: swaroop ( lighting, music management)
: anurag -nareter
:nagendra- monkey to man
Contact - https://www.facebook.com/profile.php?id=100076471603964
Facebook Event: https://fb.me/e/4Sdc2sObr
Show Pictures: https://www.facebook.com/media/set/?set=a.5515227188504560&type=3
Comments
Post a Comment