.ನಮ್ಮ ಹೊಸಬೆಳಕು ನಾಟಕ ನೋಡಿದವರಿಗೆ ಮುಂದುವರೆದ ಓದು... Cover & Publication Information Author: ಕೆ. ವಿ. ಸುಬ್ಬಣ್ಣ Title: ನಾಟಕ ಮತ್ತು ಸಿನೆಮಾ Publisher: ಅಕ್ಷರ ಪ್ರಕಾಶನ, ಹೆಗ್ಗೋಡು (ಸಾಗರ), ಕರ್ನಾಟಕ On Behalf of: ನೀನಾಸಮ್ ಚಿತ್ರಸಮಾಜ ಹೆಗ್ಗೋಡು ಪರವಾಗಿ Book Series: ಪುಸ್ತಕ ಸಂಚಯ 172 Publication Details:** NATAKA MATTU CINEMA : (Kannada) On Theatre and Film by K. V. Subbanna; Printed at Nethra Printers, 6th Road, Chamarajpet, Bangalore-560018; and Published by Akshara Prakashana, Sagar, (Karnataka) 577401; First Impression September 1979; Pages 16; Price Rs. 1-50. Copyright: Author ನಾಟಕ ಮತ್ತು ಸಿನೆಮಾ ನಮ್ಮಲ್ಲಿ ಸಾಹಿತ್ಯನಾಟಕದ ಬಗ್ಗೆ ಬೆಳೆದಿರುವ ತಿಳಿವು ರಂಗ ನಾಟಕದ ಬಗ್ಗೆ ಬೆಳೆದಿಲ್ಲವೇನೋ ಎಂದು ನನಗೆ ಸಂದೇಹ. ನಮ್ಮಲ್ಲಿ ರಂಗನಾಟಕ ಅಷ್ಟು ಪ್ರಬುದ್ಧವಾಗಿ ಬೆಳೆದಿರುವುದೂ ಅಪರೂಪವೇ. ಚಲನ ಚಿತ್ರವಂತೂ ಬಹಳ ಈಚೆ, ನೆನ್ನೆ ಮೊನ್ನೆ ಹುಟ್ಟಿಕೊಂಡಿದ್ದು, ಬೇರೆ ದೇಶಗಳಲ್ಲಿ ಬೆಳೆದ ಹಾಗೆ ಅದು ನಮ್ಮಲ್ಲಿ ಬೆಳೆದೂ ಇಲ್ಲ, ಅದರ ಬಗ್ಗೆ ನಮ್ಮ ತಿಳಿವು ತೀರಾ ಕಡಿಮೆ. ಇವುಗಳನ್ನೆಲ್ಲ ಗಣನೆಯಲ್ಲಿಟ್ಟುಕೊಂಡು ರಂಗಭೂಮಿ – ಚಲನಚಿತ್ರ (ನಾಟಕ-ಸಿನಿಮಾ) ಇವುಗಳ ಸ್ವರೂಪ ಮೂಲತಃ ಯಾವಥರದ್ದು ಅನ್ನುವುದರ ಪರ...
ಪ್ರದರ್ಶನ ಕಲಾ ಸಂಸ್ಥೆ | prakasamtrust@gmail.com