ಪ್ರಕಸಂ ತಂಡಕ್ಕೀಗ 25 ವರ್ಷ. ಅಭಿನಂದನೆಗಳು❤ ಆದರೆ ಅಷ್ಟೇ ಹೇಳಲು ಸಾಧ್ಯವಿಲ್ಲ. ಯಾಕೆಂದರೆ, ಇವತ್ತು ಸಂಚಾರಿ ಥಿಯೇಟರ್ ಇಟ್ಟ ದಿಟ್ಟ ಹೆಜ್ಜೆ ಗುರುತುಗಳಲ್ಲಿ ಪ್ರಕಸಂ ಮತ್ತು PD ಸತೀಶ್ ಅವರ Unconditional love ಮತ್ತು ಬಂಡೆಯ ತರಹದ ಬೆಂಬಲ ಇತ್ತು ಎಂಬುದನ್ನು ತಿಳಿಸಲು ನನಗೆ ಖುಷಿಯಿದೆ. 2012 ರಲ್ಲಿ ನನಗೆ PD ಸತೀಶ್ ಚಂದ್ರ ಅವರ ಪರಿಚಯವಾಯ್ತು. ಆ ಹೊತ್ತಿಗೆ ಅವರು ಬೆಂಗಳೂರಿನ ಹನುಮಂತನಗರದಲ್ಲಿರುವ ಕೆ.ಹೆಚ್.ಕಲಾಸೌಧ ರಂಗಮಂದಿರವನ್ನು ನಿರ್ವಹಿಸುವ ಜವಾಬ್ದಾರಿ ತೆಗೆದುಕೊಂಡಿದ್ದರು. ಆ ರಂಗಮಂದಿರದ ತಳಭಾಗದಲ್ಲಿ ಗುಂಡಪ್ಪ ಆರ್ಟ್ ಗ್ಯಾಲರಿ ಹೆಸರಿನಲ್ಲಿ ಖಾಲಿ ಜಾಗವಿತ್ತು. PD ಯವರು ಆ ಜಾಗದಲ್ಲಿ ಸಂಚಾರಿ ಥಿಯೇಟರ್ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರು. ರಂಗತಂಡವೊಂದು ತನ್ನದೇ ಒಂದು ಜಾಗವನ್ನು ದಿನದ 24 ಗಂಟೆಯೂ ತನ್ನ ಸುಪರ್ದಿಯಲ್ಲಿಟ್ಟುಕೊಂಡು ಬೇಕಾದ ಸಮಯದಲ್ಲಿ ಕೆಲಸ ಮಾಡುವ ಸ್ವಾತಂತ್ರ್ಯ ದ ಅದ್ದೂರಿತನವನ್ನು ಕನಸು ಕಾಣುವ ದೈರ್ಯ ನಮ್ಮೊಳಗೆ ಹುಟ್ಟುವಂತೆ ಮಾಡಿದ PD ಸತೀಶ್ ಅವರಿಗೆ ಸಂಚಾರಿ ಥಿಯೇಟರ್ ಎಂದಿಗೂ ಆಭಾರಿಯಾಗಿರುತ್ತದೆ. ಸಂಚಾರಿ ಥಿಯೇಟರ್ ಹನುಮಂತನಗರದಲ್ಲಿ ಸ್ಥಾಪಿತಗೊಂಡ ಕ್ಷಣದಿಂದ ನಮ್ಮೊಳಗೆ ಹುದುಗಿದ್ದ ಕನಸುಗಳಿಗೆಲ್ಲ ರೆಕ್ಕೆ ಬಂದವು. ಮಕ್ಕಳ ರಂಗಭೂಮಿ ರಂಗೇರಿತು. ರಂಗಶಿಕ್ಷಣಕ್ಕೆ ಚಾಲನೆ ಸಿಕ್ಕಿತು. ಜೊತೆಗೆ ಮಹತ್ತರ ಪ್ರದರ್ಶನಗಳು ಕಳೆಕಟ್ಟಿದವು. ಸಂಜೆಯಾಯಿತೆಂದರೆ ಕಲಾಸೌಧ ಮೇಲೆ ಮತ್ತು ಕೆಳಗೆ ರಂಗಭೂಮಿಯಲ...
ಪ್ರದರ್ಶನ ಕಲಾ ಸಂಸ್ಥೆ | prakasamtrust@gmail.com