Skip to main content

ವರಲಕ್ಷ್ಮಿ ಅವಾಂತರ, ಪತ್ರಿಕಾ ಪ್ರಕಟಣೆ | Press Note, Varalakshmi Avantara

ಪತ್ರಿಕಾ ಪ್ರಕಟಣೆ


ನಾಟಕ: ವರಲಕ್ಷ್ಮಿ ಅವಾಂತರ 
ಛಾಯಾ ಚಿತ್ರಗಳು (ಕೃಪೆ: ಸ್ಮಿತಾ ಚಂದನ್): https://t.ly/MIrO 
ಸ್ಥಳ: ಕೆ.ಹೆಚ್ ಕಲಾಸೌಧ  
ಸಮಯ ಹಾಗು ದಿನಾಂಕ: ಶನಿವಾರ ಮೇ 27, 7.30  ಗಂಟೆಗೆ ಮತ್ತು ಭಾನುವಾರ ಮೇ 28, 4.30ಕ್ಕೆ ಹಾಗು 7.30ಕ್ಕೆ
ವಿವರಗಳಿಗೆ: www.prakasamtrust.org/va ಅಥವಾ ಕರೆ ಮಾಡಿ 9900012648

ವರಲಕ್ಶ್ಮಿ ಅವಾಂತರ ಪ್ರದರ್ಶನ ಕಲಾ ಸಂಸ್ಥೆಯ ಹೊಚ್ಚ ಹೊಸ ಹಾಸ್ಯ ನಾಟಕ. ಈ ನಾಟಕವು ನಮ್ಮ ಹಾಗು ಸಾಕು ಪ್ರಾಣಿಗಳ ನಡುವಿನ ಸಂಭಂದದಲ್ಲಿ ನಡೆಯುವ ಪ್ರಸಂಗಗಳ ಗುಛ್ಚ.  ನಾಟಕದೊಳಗೆ ಸ್ಟಾಂಡಪ್ ಅಳವಡಿಸಿಕೊಂಡಿರುವ ಮೊಟ್ಟ ಮೊದಲ ಪ್ರಯೋಗ ಇದಾಗಿರುತ್ತದೆ. ಈ ನಾಟಕ ಮದುವೆಯ ನಂತರ ಗಂಡು ಹೆಣ್ಣಿನ ನಡುವಿನ ಸರಸಮಯ ಗೊಂದಲಗಳ ಬಗ್ಗೆ ವ್ಯಾಖ್ಯಾನ ಮಾಡುತ್ತದೆ. ನಮ್ಮೆಲ್ಲರ ಜೀವನದ ಎಳೆಗಳನ್ನೇ ಬಳಸಿಕೊಂಡು ಪ್ರೇಕ್ಷಕರನ್ನು ಮನರಂಜಿಸಲು ಈ ನಾಟಕ ಸಜ್ಜಾಗಿದೆ.

ಪ್ರಕಸಂ ಬಗ್ಗೆ: ಪ್ರಕಸಂ (ಪ್ರದರ್ಶನ ಕಲಾ ಸಂಸ್ಥೆ) ತನ್ನ ಎಲ್ಲಾ ನಾಟಕ ಪ್ರಯೋಗಗಳಲ್ಲೂ ಹೊಸತನ್ನೇ ನೀಡಿದೆ. 5D ನಾಟಕ ೧೩ ಮಾರ್ಗೋಸಾ ಮಹಲ್,  ಕಾದಂಬರಿ ಮತ್ತು ಚಲನಚಿತ್ರ ಆಧಾರಿತ ಹೊಸಬೆಳಕು, ಮೊದಲನೇ ಕನ್ನಡದ ಸ್ಟಾಂಡ್ ಅಪ್ ಪ್ರದರ್ಶನ ಸಿಹಿಕಹಿ ಚಂದ್ರು ನಡೆಸಿಕೊಟ್ಟ “ಕೀಟಲೆ”,  ಸಿಹಿಕಹಿ ಚಂದ್ರು ನಮ್ಮ ನಾಟಕ ಬೋಗಿಯಲ್ಲೂ ಏಳು ವಿಭಿನ್ನ ಪಾತ್ರ ಮಾಡಿದ್ದಾರೆ, ಸಂಗೀತದ ಆಯಾಮಗಳನ್ನು ನೋಡಿದ ಸ್ವರಾಗ ಕಾರ್ಯಕ್ರಮ, ಪೌರಾಣಿಕವನ್ನು ಇಂದಿನ ದಿನಗಳೊಂದಿಗೆ ಬೆರೆಸಿದ ಸೈರಂದ್ರಿ ಮತ್ತು ಎಲ್ಲರನ್ನು ನಕ್ಕು ನಲಿಸಿದ ರಾಜೇಂದ್ರ ಕಾರಂತ ಅವರ ಮಹಪೀಡೆ ಮಹಬ್ಲೂ, ಕೆಲವು ಉದಾಹರಣೆಗಳಷ್ಟೆ. ಪಾಳು ಬಿದ್ದ ಕೆ.ಎಚ್. ಕಲಾಸೌಧವನ್ನು 2009-2018ರವರೆಗೆ ನೋಡಿಕೊಂಡು, ಅದನ್ನ ಸಾಂಸ್ಕೃತಿಕ ಕೇಂದ್ರವನ್ನಾಗಿಸಿದ್ದು, ಪ್ರಕಸಂನ ಕಿರೀಟದ ಕೊಹಿನೂರ್ ಎಂದೇ ಹೇಳಬಹುದು.  ಪ್ರಕಸಂ ಪ್ರದರ್ಶನ ಕಲೆಗಳಿಂದ, ಪ್ರದರ್ಶನ ಕಲೆಗಳಿಗಾಗಿ ಮೀಸಲಿರುವ NGO. ಹೊಸ ಬಗೆಯ ನಾಟಕಗಳನ್ನು ಬೆಳೆಸುವ, ಅದಕ್ಕೆ ಪ್ರೇಕ್ಷಕವರ್ಗವನ್ನು ಹುಟ್ಟಿ ಹಾಕುವ ಹಾಗು ಉನ್ನತ ಮಟ್ಟದ ಪ್ರದರ್ಶನ ಕಲಾ ಪ್ರಯೋಗಗಳನ್ನು ಪ್ರದರ್ಶಿಸುವ ಉದ್ದೇಶದೊಂದಿಗೆ ಈ ಸಂಸ್ಥೆ ಪ್ರಾರಂಭವಾಗಿ ಇಂದಿನ ವರೆಗೂ ನಡೆದುಕೊಂಡು ಬಂದಿದೆ. ಪ್ರಕಸಂ 2001ರಿಂದ ಇಂದಿನವರೆವಿಗೂ ಮಾಧ್ಯಮ ಹಾಗು ಪ್ರದರ್ಶನ ಕಲಾ ಕ್ಷೇತ್ರಕ್ಕೆ ಸಂಭಂದಿಸಿದ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ. ಇನ್ನು ಹೆಚ್ಚಿನ ವಿವರಗಳಿಗೆ www.prakasamtrust.org ನೋಡಿ

ನಿರ್ದೇಶಕರ ನುಡಿ, ಪಿ.ಡಿ. ಸತೀಶ್ ಚಂದ್ರ: "ನಾಗವೇಣಿ ರಂಗನ್ ಅವರು ನನ್ನ ಬಳಿ ಬಂದು ಈ ನನ್ನ ನಾಟಕವನ್ನು ನಿರ್ದೇಶಿಸಬೇಕು ಎಂದಾಗ ನನಗೆ ಆಶ್ಚರ್ಯವಾಯಿತು. ಅನೇಕ ಬರಹಗಾರರು ಹಾಗು ನಿರ್ದೇಶಕರು ನನ್ನನ್ನು ಗಂಭೀರ ಸನ್ನಿವೇಶಗಳನ್ನೂ ಬದಲಿಸಿ ಹಾಸ್ಯ ಪಾತ್ರಗಳನ್ನು ಮಾಡಿಬಿಡುವುವನೆಂದು ದೂರ ಸರಿಸಿದ್ದರು.. ನಾಗವೇಣಿ ಅವರ ಹಿಂದಿನ ನಾಟಕಗಳನ್ನು ನೋಡಿ ಅವರನ್ನು ನಾಟಕದ ಬಗ್ಗೆ ಚರ್ಚಿಸಲು ಭೇಟಿ ಮಾಡಿದೆ.  ಮೊದಲನೇ ಬಾರಿ ಓದಿದಾಗಲೇ ನನಗೆ ರಂಗದ ಮೇಲೆ ಹೇಗಿರಬಹುದೆಂದು ನೆನೆದು ನಗಲಾರಂಭಿಸಿದೆ. ಅವರು ನನಗೆ ಕೊಟ್ಟ ಸ್ವಾತಂತ್ರದಿಂದ ಸ್ವಲ್ಪ ಬದಲಾವಣೆ ಮಾಡಿ ಇನ್ನಷ್ಟು ಹಾಸ್ಯಮಯವಾಗಿಸಿದೆ. ನಾಗವೇಣಿ ಅವರು ನನ್ನ ಬದಲಾವಣೆಗಳ್ಳನ್ನು ಒಪ್ಪಲು ಸ್ಟಾಂಡ್ ಅಪ್ ಕಾಮಿಡಿ ಮತ್ತು ಇನ್ನಿತರ ವಿನ್ಯಾಸವೇ ಕಾರಣ. ಪ್ರತಿ ತಾಲೀಮಿನಲ್ಲೂ ಅದೇ ಹಾಸ್ಯ ಸನ್ನಿವೇಶಗಳಿಗೆ ಪದೇ ಪದೇ ನಕ್ಕು ನಲಿದಿದ್ದೇನೆ. ಇದೆ ರೀತಿ ಪ್ರೇಕ್ಷಕರು ನಕ್ಕು ನಲಿಯುತ್ತಾರೆಂದು, ಹಿಂದೆಂದೂ ಕಾಣದಂತೆ ಮನೋರಂಜನೆ ನೀಡುವೆವೆಂದು ಆಶಿಸುತ್ತಿದ್ದೇನೆ. 

ಲೇಖಕಿ, ನಾಗವೇಣಿ ರಂಗನ್: ನನ್ನ ಡ್ರಾಮಾ "ವರಲಕ್ಷ್ಮಿ ಅವಾಂತರ"ಪಿ.ಡಿ.ಸತೀಶ್ ಚಂದ್ರ ಪ್ರಕಸಂ ತಂಡದಿಂದ ವೇದಿಕೆಗೆ ತರತಾ ಇದಾರೆ, ಇದು ನನಗೆ ತುಂಬ ಖುಷಿ ವಿಷಯ..ಈ ನಾಟಕಾನ ನಿರ್ದೇಶಿಸೋದಕ್ಕೆ ಒಳ್ಳೆ ಹಾಸ್ಯಪ್ರಜ್ಞೆ ಇರುವ ರಂಗಕರ್ಮಿಗೆ ಕೊಡಬೇಕು ಅಂತ ಆಸೆ ಇಟ್ಟು ಕೊಂಡಿದ್ದೆ. ಸತೀಶ್ ರವರಿಗಿಂತ ಒಳ್ಳೆ ವ್ಯಕ್ತಿ ಬೇಕಾ? ನಾನು ಪ್ರಕಸಂನ ಡ್ರಾಮ ರೀಡಿಂಗ್ ಹೋದಾಗ ಅವರು ಮತ್ತು ಟೀಂನವರು ಪ್ರತಿ ಜೋಕ್ಗೆ ನಗತಾ ಇದ್ದಿದ್ದು ನೋಡಿ ಅವರು ಈ ಡ್ರಾಮಾ ಖಂಡಿತ ನಿರ್ದೇಶಿಸುತ್ತಾರೆ ಅಂತ ಖಾತರಿ ಆಯಿತು. ಈ ನಾಟಕ ನಾ ಕಂಡ ಸತ್ಯಕತೆ ಅನ್ನಬಹುದು. ಅದಕ್ಕೆ ಸ್ವಲ್ಪ ಹಾಸ್ಯದ ಒಗ್ಗರಣೆ ಹಾಕಿ ಅಡಿಗೆ (ಡ್ರಾಮಾ) ರೆಡಿಮಾಡಿದೀನಿ. ಸತೀಷ್ ಸ್ವಲ್ಪ ಕೊತ್ತಂಬರಿ, ಕರಿಬೇವು, ವಗ್ಗರಣೆ ಹಾಕಿ ಆ ಡಿಷ್ ನ ಡ್ರೆಸ್ ಮಾಡಿ ನಿಮಗೆ ಸ್ಟೇಜ್ ಮೇಲೆ ಸರ್ವ್ ಮಾಡ್ತಿದಾರೆ..ಈ ಡ್ರಾಮಾ ನೋಡುವಾಗ ನೀವು ಎಷ್ಟು ಕನೆಕ್ಟ್ ಅಗ್ತೀರ ಅಂದ್ರೆ ನಿಮ್ಮ ಮನೆಯಲ್ಲೇ ಘಟನೆ ಆಗ್ತಾ ಇದೆಯೇನೋ ಅನ್ನಿಸುತ್ತೆ. ಅಯ್ಯೋ ಎಲ್ಲಾ ನಾನೆ ಹೇಳ್ತಾ ಇದೀನಿ ಡ್ರಾಮಾಗೆ ಬನ್ನೀಪ್ಪಾ ಚಪ್ಪಾಳೆ ತಟ್ಟಿಕೊಂಡು ನಗೋದು ಬೇಡವಾ?

ತಾಂತ್ರಿಕ ವರ್ಗ

ವಿನ್ಯಾಸ, ನಿರ್ದೇಶನ - ಪಿ. ಡಿ. ಸತೀಶ್ ಚಂದ್ರ
ರಚನೆ - ನಾಗವೇಣಿ ರಂಗನ್
ಸ್ಠಿರ ಚಿತ್ರಣ - ಸ್ಮಿತಾ ಚಂದನ್
ತಾಲೀಮು ನಿರ್ವಹಣೆ - ಆರತಿ ಮಾಹುಲಿ
ಸಾಮಾಜಿಕ ಜಾಲತಾಣ ನಿರ್ವಹಣೆ - ಪೂಜಾ ಕಶ್ಯಪ್
ಬೆಳಕು - ವಿಜಯಕುಮಾರ್ ಪಾಂಡವಪುರ

ಪಾತ್ರವರ್ಗ

ಮನೆಯಯಜಮಾನ (ನಾಯಕ) - ಶೇಷಾದ್ರಿ - ಶ್ರೀಹರಿ ಕಶ್ಯಪ್ | ಸುರೇಶ್
ಶೇಷಾದ್ರಿಯ ಹೆಂಡತಿ (ನಾಯಕಿ) -  ಶ್ರೀಲಕ್ಷ್ಮಿ - ರೂಪ ಕೋಮರ್ಲಾ | ರೂಪಶ್ರೀ ರೋಹಿತ್
ಶ್ರೀಲಕ್ಷ್ಮಿಯ ಸ್ನೇಹಿತೆ  - ಮಂಗಳ - ಶಾಂಭವಿ ರಂಗನಾಥ್
ಶೇಷಾದ್ರಿಯ ಸ್ನೇಹಿತ  -  ಪ್ರಸಾದ್ - ಗುರುಪ್ರಸಾದ್ 
ಶೇಷಾದ್ರಿಯ ಸ್ನೇಹಿತ  -  ಮಂಜುನಾಥ್ - ಚೇತನ್ N
ಶೇಷಾದ್ರಿಯತಾಯಿ   - ಶಾಂತಮ್ಮ - ಲೀಲಾವತಿ S ಕುಮಾರ್
ಶೇಷಾದ್ರಿಯ ಬಾಸ್  - ಸರಳ - ರಚನ ಶ್ರೀಹರಿ | ಚೈತ್ರ ರವಿಶಂಕರ್
ಅಂಡಾಂಡ ಗುರೂಜಿ ಮತ್ತು ಅರ್ಚಕರು - ಅರ್ಜುನ್ ಲಕ್ಷ್ಮಿನರಸು
ವರಲಕ್ಷ್ಮಿ - ಶ್ರೀಲಕ್ಷ್ಮಿಯ ಬಾಸ್  - ವಿನೋದ್


Press Note


Play: Varalakshim Avantara
Press Photos (Courtesy: Smitha Chandan): https://t.ly/MIrO 
Venue: KH Kala Soudha
Date & Time: Saturday May 27th at 7.30 PM & Sunday May 28th at 4.30 & 7.30 PM
Details: www.prakasamtrust.org/va or call Hari on 9900012648

Varalakshmi Avantara is Prakasam's latest comedy production which brings about the humans in animals and animals in humans.  A comedy rollercoaster with unique inclusions like Stand-up in a play for the very first time this is set to entertain audiences. The play also speaks about the post marital dilemma of all men and women.  With a leaf from all our lives, this play is set to entertain the audiences.  

About Prakasam: Prakasam has always done something new in its productions. Like the 5D play 13 Margosa Mahal, Novel & Movie based play Hosabelaku, First Kannada Standup Show called Keetale featuring Sihi Kahi Chandru way back in 1999, Sihi Kahi Chandru also featured in 7 different roles in the play Bogie, musical extravaganza with Swaraga programs, we time travelled with Sairandhri & made people laugh with Rajendra Karanth’s Mahapeede Mahablu. The pinnacle of Prakasam’s achievemnets is running KH Kala Soudha between 2009-2018 & promoting preforming arts. Prakasam or Pradarshana Kalaa Samsthe is an NGO created with the sole intention of promoting, nurturing and creating new works of performing arts. Prakasam strives hard to achieve its primary goal of promoting and nurturing young talent & providing a sustainable platform for performing arts, Prakasam has been active in media and related performing arts field since 2001.  For details see www.prakasamtrust.org

Directors Note, PD Sathish Chandra: When Nagaveni madam told me that I should direct one of her scripts I was confused.  Since most of the writers and directors avoid me because I make serious scenes and productions comic. this was strange to see a writer asking me to direct her work.  Then I saw her previous writing and productions based on them, then I braved to call her to discuss this play.  When I first read it, I was laughing imagining it on stage.  With her liberty I added some tweaks to make it funnier.  The stand-up gig & few other design elements convinced Nagaveni madam to agree to my script inputs.  I have enjoyed every rehearsal & laughed repeatedly at the same jokes. I hope to entertain audiences in a never before way.

Writers Note, Nagaveni Rangan: I am very happy that PD Sathish Chandra is brining my work on stage. I wanted someone with commitment to theatre and impeccable comedy timing to take this script up. After I met PD it was evident that I would not find anyone like him. They invited me for the first reading and by the way they reacted I was sure that this will see stage soon. This indeed is a true story based on my own experiences.  I have made the dish ready, PD has added dressing to that and will be serving it on stage for all of you. This play will connect to every individual who is watching, I think I should stop now and invite you all to come and laugh with us.

Crew
Design & Direction - PD Sathish Chandra
Writer - Nagaveni Rangan
Rehearsals Management – Aarti Mahuli
Social Media – Pooja Kashyap
Photography – Smitha Chandan
Lights – Vijaykumar Pandavapura

Cast
Shreehari Kashyap / Suresh as Seshadri
Roopa Komarla / Roopashree Rohith as Srilakshmi
Guruprasad as Prasad
Leelavathi S Kumar as Shantamma
Shambhavi Ranganath as Mangala
Arjun Laxminarasu as Guruji and Bhattru
Chethan N as Manjunath
Rachana Shrihari / Chaitra Ravishankar as Sarala
Vinod as Varalakshmi

Comments

Popular posts from this blog

Team Prakasam

Team Prakasam during one of it's Pot-luck Party on 17-03-2013 ( JOIN US HERE ) We at Prakasam  believe in team work and building a strong team.  All the work Prakasam has done in the past decade ( Kala Krushi Page ) has been possible because of the selfless and unconditional support of its team members.  Where there is a team there would be work related to performing arts and also many more merry gatherings, parties, team holidays etc.  LOOK AT US WHEN WE PLAY & WHEN WE WORK . We are listing the official ones below to enthuse and entertain committed performing arts lovers to join us as volunteers.  Join us by applying to our Production Internship Programme  or by answering 10 simple questions, CLICK HERE . All our Crazy Empathy Videos (even before there was tiktok or reels) Annual Trip 2023 Secret Santa+6 Birthdays+Mini Potluck on 25 Dec 2013 Niswarga trip post KHKS4 fest, 19 April 2013 IPL6 Empathy a Jumping J...

Intern with Prakasam

Logo If you are keen to do theatre, want to be a Thespian from a Topophobian? want to do something to break the monotony of life? Come and join us as a  Production Intern .  Fill in this Form & let us know your intent to join Prakasam. The Production Intern Program offers you the opportunity to work alongside professional artists and managers at the forefront of an award-winning regional not-for-profit theatre in the beautiful surroundings at  KH Kala Soudha   ( READ MORE )  situated in Ramanjaneya Temple park in Hanumanth Nagar, Basavanagudi.  If interested mail us with your intent at  prakasamtrust@gmail.com  now...  The production duration varies on the production chosen for the internship... Also this is the best and fastest way to join Prakasam .  Plus chance to be part of the elite BroaderWay training programme conducted exclusively for Prakasam interns.  If you are musically inclined you should check out Swaraaga te...

Meghashree's Profile

Contact: 7259998222/333 or mail prakasamtrust@gmail.com Meghashree hails from a family of Legendary Theatre and Motion Picture Personalities. She possess Diploma in Fashion Technology from Rajiv Gandhi Memorial Polytechnic. Blessed as the Grand daughter of Sri. C. Honnappa Bhagavathar - a stalwart in the motion pictures of Kannada Cinema, who was also renowned as the '' Gaana Kala Bhushana '' in Tamil and Kannada. He is bestowed with the Karnataka Nataka Academy Awards, Gold medals for his extraordinary talent as a great musician and for his splendid style of  ''Harikatha''. His name is synonymously with the splendid folk art / music which is now moving into the oblivion. Professional Details : Theatre : Active member of Benaka and Pra.Ka.Sam theatre  troupes. Plays Performed are Gokula Nirgamana, Jokumaraswamy, Katthale Belaku, Hayavadhana, Hosabelaku, Katha Sangama, Chandrahasa, Kaakana Kote, Pramilarjuneeyam, Bogie...... T.V Serials...