“ಕಥಾ ಸಂಗಮ” ಕನ್ನಡ ಸಾಹಿತ್ಯದ ಮೇರು ಸಾಹಿತಿಗಳ ಸಣ್ಣ ಕಥೆಗಳನ್ನೊಳಗೊಂಡ ಚಿಕ್ಕ ಹಾಗು ಚೊಕ್ಕ ನಾಟಕ
“ದೇಶದ ರಾಜ್ಯಭಾರವನ್ನು ಎದೆಯಮೇಲೆ ಹೇರಿಕೊಳ್ಳದೆ, ಭುಜದ ಮೇಲೆ ಹೊತ್ತು ನಡೆಸುತ್ತಾನೆ” ಎಂಬ ಕುವೆಂಪುರವರ ವಿಶ್ವಮಾನವತ್ವ ಹಾಗು ದೇಶಪ್ರೇಮದ ಸಂದೇಶದೊಂದಿಗೆ ಮಾಸ್ತಿ, ಗೊರೂರು, ಗೌರಮ್ಮ, ದೇವರಾಯ, ತರಾಸುರವರ ಪ್ರೇಮದ ಹಂದರವುಳ್ಳ ಸಣ್ಣ ಕಥೆಗಳನ್ನಾಧರಿಸಿದ “ಕಥಾ ಸಂಗಮ” ನಾಟಕವನ್ನು ಪ್ರದರ್ಶನ ಕಲಾ ಸಂಸ್ಥೆಯವರು ಪ್ರೇಮಿಗಳ ದಿನಾಚರಣೆಯಂದು ದೇಶೀಯ ಹಾಗು ಸಾಹಿತ್ಯಕ ಮೆರುಗಿನೊಂದಿಗೆ ಆಚರಿಸಿದರು.
ರಂಗಭೂಮಿಯ ವ್ಯಶಿಷ್ಟ್ಯಗಳ್ಳನ್ನು ಮತ್ತು ಕ್ಲಿಷ್ಟ ಕಥಾಕಲ್ಪನೆಗಳನ್ನು ಸರಳ ರೀತಿಯಲ್ಲಿ ಜನಸಾಮಾನ್ಯರಿಗೆ ತಲುಪಿಸುಲ್ಲಿ ಈ ನಾಟಕ ಯಶಸ್ವಿಯಾಗಿದೆ. ಈ ಪ್ರಯೋಗದಿಂದ ಕನ್ನಡಸಾಹಿತ್ಯ ಲೋಕದ ಶ್ರೀಮಂತಿಕೆಯು ನೆರೆದಿದ್ದ ಜನರ ಮನವನ್ನು ರಂಜಿಸಿತು. ಸಾಹಿತ್ಯಕ ಅಂಶವನ್ನು ಹಿಡಿದಿಡಲು ಕಥೆಗಳಲ್ಲಿನ ಸಂಭಾಷÀಣೆಯನ್ನು ಯಥಾವತ್ತಾಗಿ ರಂಗರೂಪಕ್ಕೆ ತರಲಾಗಿತ್ತು. ಹಳೆಗನ್ನಡ ಹಾಗು ಕಠಿಣ ಪದಗಳಿದ್ದ ಮಾತುಗಳನ್ನು ಕೇಳಿದ ಸಭಿಕರು ಸ್ವಲ್ಪ ತಬ್ಬಿಬ್ಬಾಗಿದ್ದು ಅದನ್ನು ಅರ್ಥಮಾಡಿಕೊಳ್ಳಲು ಹೆಣಗಿದ್ದು ವಿಪರ್ಯಾಸವೇ ಸರಿ. ಆದರೂ ಈ ನಾಟಕ ಹಾಸ್ಯ ಮತ್ತು ಸಂದೇಶಗಳನ್ನು ಯಶಸ್ವಿಯಾಗಿ ತಲುಪಿಸಿತು. ನಾಟಕಗಳ ನಡುವೆ ಸಿಹಿ ಕಹಿ ಗೀತಾರವರು ತಮ್ಮ ನಾಟಕೀಯ ನಿರೂಪಣೆಯಿಂದ ಮನ ಗೆದ್ದರು. ಬೆಳಕಿನ ವ್ಯವಸ್ಥೆ ರಂಗದ ಮೇಲಿನ ನಟನೆಯಮುಂದೆ ಸಾಧಾರಣವೆನಿಸಿತು. ಅತಿಕಡಿಮೆ ಸಮಯದಲ್ಲಿ ನಡೆದ ಉಡುಗೆ ಮತ್ತು ರಂಗಪರಿಕರಗಳ ಬದಲಾವಣೆ ಅಚ್ಚರಿತರಿಸಿತು. ಪೆÇ್ರಜೆಕ್ಷನ್ ಬಳಸಿದ ಕೆಲವು ನಾಟಕಗಳು ಹೊಸತನವನ್ನು ತಂದಿದ್ದು ಆಲಾಪಗಳನ್ನು ಅತ್ಯಂತ ಯಶಸ್ವಿಯಾಗಿ ಎಲ್ಲಾ ನಾಟಕಗಳಲ್ಲೂ ಬಳಸಲಾಯಿತು. ಕುಮಾರಿ ಅಪೂರ್ವರವರ ಅಧ್ಬುತ ದನಿ ನೋಡುಗರ ಮನ ಗೆದ್ದಿತು. ಪಿ. ಡಿ. ಸತೀಶ್ ಚಂದ್ರರ ಪ್ರಧಾನ ನಿರ್ದೇಶನ ಹಾಗು ಎಲ್ಲಾ ವಿಭಾಗಗಳ ತಾಲೀಮು ಈ ಯಶಸ್ಸಿನ ರೂವಾರಿ ಎಂದು ನಾಟಕದ ನಂತರ ನಡೆದ ಮಾತುಕಥೆಯಲ್ಲಿ ಬಯಲಾಯಿತು. ಎಲ್ಲಾ ನಾಟಕಗಳಲ್ಲೂ ಹೊಸತನವನ್ನು ತರಲು ಪ್ರದರ್ಶನ ಕಲಾ ಸಂಸ್ಥೆಯ ಯುವ ನಿರ್ದೇಶಕರಿಗೆ ಕಥಾನಿರ್ದೇಶನ ಮಾಡುವ ಪ್ರಯತ್ನ ಪ್ರಶಂಸನೀಯ.
ನಾಟಕದ ಪ್ರಾರಂಭದಲ್ಲಿ ನಿರೂಪಕಿ ಆರು ಕಥೆಗಳನ್ನು ಆರು ಹೂಗಳಿರುವ ಗುಚ್ಚಕ್ಕೆ ಹೋಲಿಸಿ ಬರಲಿರುವ ಕಥೆಗೆ ಪೀಠಿಕೆ ಹಾಕಿದರು. ಮೊದಲ ಕಥೆ ಮಾಸ್ತಿ ವೆಂಕಟೇಶ ಅಯ್ಯ್‍ಂಗಾರರ ಅಂಜಪ್ಪನ ಕೋಳಿ ಕಥೆ, ಚಂದನ್ ಶಂಕರ್‍ರವರ ಕಥಾನಿರ್ದೇಶನದಲ್ಲಿ ಅಂಜಪ್ಪನ ಜೀವನದಲ್ಲಿ ನಡೆದ ಆಕಸ್ಮಿಕ ಅನ್ಯಾಯ ಹೇಗೆ ನ್ಯಾಯ ನೀಡುವುದರ ಮಜಲನ್ನು ಬದಲಾಯಿಸಬಹುದೆಂಬುವುದನ್ನು ಪ್ರಾಮಾಣಿಸುತ್ತದೆ. ಎರಡನೇ ಕಥೆ ಬಾಗಲೋಡಿ ದೇವರಾಯರ ಶುಕ್ರಾಚಾರ್ಯ, ಮೊನೀಶ್ ನಾಗರಾಜ್‍ರ ಕಥಾನಿರ್ದೇಶನ ಹಾಗು ರಂಗಮಂಚವನ್ನು ಸಂಪೂರ್ಣವಾಗಿ ಬಳಸಿ ಸಂಕೀರ್ಣ ಪ್ರೇಮವಿರೋಧಿ ಕಥೆಯನ್ನು ರಂಗದಮೇಲೆ ತಂದರು. ಪ್ರೀತಿಯ ಸಹಾಯ ಪಡೆದವಳೆ ಪ್ರೀತಿಯನ್ನು ಪ್ರಶ್ನಿಸಬಯಸಿದ್ದು ಈ ಕಥೆಯ ವಿಪರ್ಯಾಸ. ಮೂರನೆ ಸಣ್ಣನಾಟಕದ ಕಥಾನಿರ್ದೇಶನ ಸಂತೋಶ್ ಮತ್ತು ಅವರ ಆಯ್ಕೆಯ ಕಥೆ ಗೊರೂರು ರಾಮಸ್ವಾಮಿ ಅಯ್ಯ್‍ಂಗಾರರ ಕಮ್ಮಾರ ವೀರಭದ್ರಾಚಾರಿ ಜೋಯಿಸನಾದದ್ದು. ಕಾಯಕವೇ ಕೈಲಾಸ ಎಂಬ ನಾನ್ನುಡಿಯನ್ನು ಪ್ರದರ್ಶಿಸಿದ ಈ ಕಥೆ ಹೇಗೆ ಕಾಯಕವನ್ನೇ ಪ್ರೀತಿಸಿದ ಕಮ್ಮಾರನಿಗೆ ತಡವಾಗಿ ಆದರೂ ತನ್ನ ಕೆಲಸವನ್ನು ಪ್ರೀತಿಯಿಂದ ಮಾಡಬೇಕೆಂಬ ಅರಿವನ್ನು ಮಾಡಿಸಿತು. ನಾಲ್ಕನೇ ಕಥೆ ಕೊಡಗಿನ ಗೌರಮ್ಮನವರ ವಾಣಿಯ ಸಮಸ್ಯೆ, ಕ್ರತಿ ಬೆಟ್ಟದ್‍ರವರ ಕಥಾನಿರ್ದೇಶನದಲ್ಲಿ ಮೂಡಿಬಂದ ಈ ಕಥೆಯು ಪ್ರೀತಿಯ ಆಕರ್ಶಣೆಯನ್ನು ಮುಖ್ಯ ಅಂಶವಾಗಿ ಪ್ರಸ್ತುತಪಡಿಸುತ್ತದೆ. ಯವ್ವೌನದ ಪ್ರೀತಿಯ ಆಕರ್ಷಣೆಯ ಮೋಡಿ ಎಂತದ್ದು, ಆಕರ್ಷಣೆಗೆ ಒಳಗಾಗಿರುವ ಹೃದಯಗಳ ಒಳಗೆ ನಡೆಯುವ ಘರ್ಷಣೆಗಳ ಬಗ್ಗೆ ಕೊಡಗಿನ ಗೌರಮ್ಮನವರು ಬರೆದ ಈ ಕಥೆ ಬಂದ ಎಲ್ಲಾಜನರ ಅಚ್ಚುಮೆಚ್ಚಿನ ನಾಟಕವಾಯಿತು. ಕೊಡಗಿನ ಗೌರಮ್ಮ ತಮ್ಮ 27 ನೇ ವಯಸ್ಸಿನಲ್ಲಿ ಜೀವನ ಪಯಣ ಮುಗಿಸಿದ ವಯಸ್ಸಿನಲ್ಲಿ ಕಿರಿಯರಾದರೂ ಲೇಖನೆಯಲ್ಲಿ ಹಿರಿಯರು ಎಂಬುದು ಈ ನಾಟಕದಿಂದ ನಿದರ್ಶನವಾಯಿತು. ಮುಂದಿನ ಕಥೆ ಕು.ವೆಂ.ಪುರವರ ಧನ್ವಂತ್ರಿ ಚಿಕೆತ್ಸೆ, ಕಥಾನಿರ್ದೇಶನ ಪಿ. ಡಿ. ಸತೀಶ್ ಚಂದ್ರ. ದೇಶಪ್ರೇಮ ಹಾಗು ದೇಶಕ್ಕಾಗಿ ಪ್ರತಿಯೊಬ್ಬರ ಕರ್ತವ್ಯವೇನೆಂಬುದನ್ನು ನಮ್ಮ ರಸಋಷಿ ಕುವೆಂಪುರವರು ತಮ್ಮ ಮುದಗೊಳಿಸುವ ವ್ಯಖರಿಯಲ್ಲಿ ಬರೆದಿರುವುದನ್ನು ನಟರು ಯಥಾವಥ್ಥಾಗಿ ವೇದಿಕೆಯಮೇಲೆ ಪ್ರದರ್ಶಿಸಿದರು. ನಗುವ ರೈತನೆ ನಮ್ಮ ದೇಶದ ಉನ್ನತಿಯ ತಳಹದಿ ಎಂಬ ಸತ್ಯವನ್ನು ಸಾರಿದ ಈ ಕಥೆಯು ದೇಶದ ಬಗ್ಗೆ ಇರುವ ನಮ್ಮೆಲ್ಲರ ಪ್ರೀತಿಯನ್ನು ಒತ್ತಿ ಹೇಳುವ ಪ್ರಯತ್ನ... ವಿಶ್ವಮಾನವತ್ವÀವನ್ನು ಸಾರಿದ ನಮ್ಮ ರಾಷ್ಟ್ರ ಕವಿ ಕುವೆಂಪುರವರ ಈ ಯೋಚನೆ ಇಂದಿಗೂ ಪ್ರಸ್ತುತ, ಊರು ನಾಡು, ದೇಶದ ಏಳಿಗೆಯಾಗಬೇಕಾದರೆ ಕಾಯಕವನ್ನು ಕರ್ತವ್ಯವನ್ನು ಎರಡು ಯೋಚನೆ ಇಲ್ಲದೆ ನಡೆಸಬೇಕು ಎಂಬ ಸಂದೇಶದೊಂದಿಗೆ ಈ ನಾಟಕವು ಕೊನೆಯಾಯಿತು. ಕೊನೆಯ ಕಥೆಯ ಕಥಾನಿರ್ದೇಶನ ಪಿ. ಡಿ. ಸತೀಶ್ ಚಂದ್ರ ಮತ್ತು ಕಥೆ ತ.ರಾ.ಸುರವರ ಇನ್ನೊಂದು ಮುಖ, ಪ್ರೀತಿ ಅನ್ನೋದು ಕೆಲವರಿಗೆ ಖುಷಿ ಕೊಟ್ಟರೆ, ಇನ್ನು ಕೆಲವರಿಗೆ ಅದು ತನ್ನ ಇನ್ನೊಂದು ಮುಖ ತೋರಿಸುತ್ತೆ ಎಂಬುದು ಈ ಕಥೆಯಿಂದ ಧ್ರುಡವಾಗುತ್ತದೆ. ಹೇಗೆ ನಾಲ್ಕು ಗೆಳೆಯರ ಪ್ರೀತಿಯ ಬಗೆಯ ಕೀಟಲೆಯ ಮಾತುಗಳು ಅವರಿಗೆ ಪ್ರೇಮದ ಇನ್ನೊಂದು ಮುಖ ತೋರಿಸುತ್ತದೆ ಎನ್ನುವುದು ಈ ಕಥೆ ಸಾದರಪಡಿಸುತ್ತದೆ.
ನಾಟಕದ ನಂತರ ಮಾತಿಗೆ ಸಿಕ್ಕ ಪ್ರಧಾನ ನಿರ್ದೇಶಕ ಪಿ. ಡಿ. ಸತೀಶ್ ಚಂದ್ರ, ತಮ್ಮ ನಾಟಕದ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತ “ಪ್ರೀತಿ ಎಲ್ಲವನ್ನು ಮೀರಿದ ಶಕ್ತಿ. ಕಾಮ. ಕ್ರೋಧ. ಲೋಭ. ಮೋಹ, ಮದ. ಮಾತ್ಸರ್ಯಗಳ ಸಾಲಿಗೆ ಪ್ರೀತಿಯನ್ನು ಸೇರಿಸಿರುವ ನಮಗೆ, ಪ್ರೀತಿಯ ಆಳದ ಬಗ್ಗೆಯಾಗಲಿ, ಅದರ ಮಜಲುಗಳ ಬಗ್ಗೆಯಾಗಲಿ ಅರಿವಿಲ್ಲದೆ, ಪ್ರೀತಿ ಎಂಬುದನ್ನು ಕೇವಲ ಪದವನ್ನಾಗಿ ಮಾತ್ರ ಬಳಸುತ್ತಿರುವ ನಮಗೆ, ಪ್ರೀತಿಯ ಉದಾತ್ತ ಶಕ್ತಿಯನ್ನು, ಅದರ ದಾಷ್ಟತೆಯನ್ನು ಸಾರಿ ಹೇಳುವ ಪ್ರಯತ್ನವೆ ಕಥಾ ಸಂಗಮ” ಎಂದರು. ಹಾಗೆ ನಾಟಕದ ಕೊನೆಯಲ್ಲಿ ಬರುವ ನಿರೂಪಕಿಯ ಸಾಲುಗಳನ್ನೂ ಉಧರಿಸಿದರು “ನೀವು ಒಮ್ಮೆ ಪ್ರೀತಿಯನ್ನು ಅರಿತು ನೋಡಿ; ಪ್ರೀತಿ ಎಂಬ ಭಾವನೆಯನ್ನು ಪ್ರೀತಿಸಿ ನೋಡಿ; ಪ್ರೀತಿಯನ್ನು ಪ್ರೀತಿಸುವ ಭಾವನೆಯು ನಿಮ್ಮಲ್ಲಿ ಸದಾಕಾಲ ಹಸಿರಾಗಿ ಪ್ರೀತಿಯ ಉಸಿರಾಗಿ ಬೆಳಗಲಿ”.
ಕಥೆಗಳನ್ನು ಎಲ್ಲಿಂದ ಹಾಗು ಹೇಗೆ ಹುಡುಕಿದಿರಿ ಎಂದಾಗ “ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಮುಡಿಗೇರಿಸಿರುವ ಕನ್ನಡ ಸಾಹಿತ್ಯ ಸಾಗರದಿಂದ ಆರು ಸಣ್ಣಕಥೆಗಳನ್ನ ಆಯ್ಕೆಮಾಡುವುದು ಸುಲಭವಾಗಿರಲಿಲ್ಲ. 1910ರಿಂದ 2010ವರೆವಿಗು ಸುಮಾರು 120 ಸಣ್ಣಕಥೆಗಳನ್ನು ಓದಿದನಂತರ ಪ್ರೀತಿಗೆ ಸಂಬಂಧಪಟ್ಟ ಆರುಕಥೆಗಳನ್ನು ನಾವು ಆರಿಸಿಕೊಂಡೆವು. ಈ ನಾಟಕವು ಕನ್ನಡ ಸಾಹಿತ್ಯ ಹಾಗು ನಾಟಕ ರಂಗಕ್ಕೆ ನಮ್ಮ ಪುಟ್ಟ ಕಾಣಿಕೆ”.
ಕರ್ನಾಟಕ ಸಾಹಿತ್ಯ ಹಾಗು ನಾಟಕ ಅಕೆಡೆಮಿ ತಮ್ಮ ನಾಟಕವನ್ನು ಕೊಡಗಿನ ಗೌರಮ್ಮನವರ ಜನ್ಮ ಶತಮಾನೋತ್ಸವದ ಅಂಗವಾಗಿ ಮಾರ್ಚಿ 5ರಂದು ಗೋಣಿಕೊಪ್ಪದಲ್ಲಿ ನಡೆವ ಸಮ್ಮೇಳನದ ಅಂಗವಾಗಿ ಪ್ರದರ್ಶನಮಾಡುವ ವಿಶಯವನ್ನೂ ತಿಳಿಸಿದರು.
ಪ್ರದರ್ಶನ ಕಲಾ ಸಂಸ್ಥೆಯ ಬಗ್ಗೆ ಮಾತನಾಡುತ್ತ “ಬೆಂಗಳೂರಿನ ರಂಗಭೂಮಿಯಲ್ಲಿ ಯುವ ಹಾಗು ಕ್ರಿಯಾಶೀಲ ನಾಟಕಕಾರರ ಕೊರತೆಯನ್ನು ನೀಗಿಸುವುದು ನನ್ನ ಹಾಗು ಪ್ರ.ಕ.ಸಂ.ನ ಉದ್ದೇಶ. ಈ ನಿಟ್ಟಿನಲ್ಲಿ ನಾವು ಕ್ರೀಯಾಶೀಲ ಹಾಗು ಸೋಪಜ್ಞ ನಾಟಕಗಳನ್ನು ಕೆ.ಎಚ್.ಕಲಾಸೌಧದಲ್ಲಿ ಪ್ರಯೋಗಿಸುತ್ತ ಬಂದಿದ್ದೀವಿ. ಸಾಹಿತ್ಯಕ ಹಾಗು ಸಂಪ್ರದಾಯಬದ್ಧ ಶೈಲಿಯಲ್ಲಿ ರೂಪಗೊಂಡಿರುವ ಕಥಾಸಂಗಮವು ಈ ನಿಟ್ಟಿನಲ್ಲಿ ಬೋಗಿ ನಾಟಕದ ನಂತರ ನಮ್ಮ ಎರಡನೇಯ ಪ್ರಯೋಗ” ಎಂದರು. ತಾವು ಪ್ರದರ್ಶನ ಕಲಾ ಸಂಸ್ಥೆಯು ‘ಕಲಾಕೃಷಿ’ ಯೋಜನೆಯಡಿಯಲ್ಲಿ ಕಲೆ ಹಾಗು ಸಂಸ್ಕøತಿಯ ಪೋಷಣೆಗಾಗಿ ಅವಿರತ ಶ್ರಮಿಸಲು ಬದ್ಧವಾಗಿದ್ದೇವೆ ಎಂದರು. ಯುವಜನರನ್ನು ಪ್ರೋತ್ಸಾಹಿಸಿ ರಂಗಭೂಮಿಗೆ ಹೊಸ ಪ್ರೇಕ್ಷಕವರ್ಗವನ್ನು ಸೃಷ್ಟಿಸಲು ಅನುಪಮ ಪ್ರದರ್ಶನ ಕಲಾ ಪ್ರಯೋಗಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಬೃ.ಬೆಂ.ಮ.ಪಾ.ನಿಂದ ಕಲಾಸೌಧವನ್ನು ಗುತ್ತಿಗೆಗೆ ಪಡೆದಿದ್ದು ಈ ರಂಗಮಂದಿರವನ್ನು ಪ್ರದರ್ಶನ ಕಲೆಗಳಿಗಾಗಿ ಮುಡಿಪಾಗಿಟ್ಟು, ಈ ರಂಗಮಂಚದ ಮೇಲೆ ಪ್ರಪಂಚದ ಎಲ್ಲಾ ಭಾಗಗಳಿಂದ ಕಲಾವಿದರು ಬಂದು ತಮ್ಮ ಅನನ್ಯ ಕಲಾಜ್ಯೋತಿಯನ್ನು ಬೆಳಗಿಸಿ ಜನವರಿ 2010ರಿಂದ ಜನವರಿ 2013ರವರಗೆ 800ಕ್ಕೂ ಹೆಚ್ಚು ಕಲಾ ಪ್ರದರ್ಶನಗಳಾಗಿವೆ ಎಂದು ಹೆಮ್ಮೆಯಿಂದ ತಿಳಿಸಿದರು.

Comments
Post a Comment