Skip to main content

#RefreshT20 Closing Ceremony Press Note

ಮಾಧ್ಯಮ ಮಿತ್ರರಿಗೆ (Scroll Down for English Release) - WINNER PICS

ವಿಷಯ: ಪ್ರಕಸಂ ರಿಫ್ರೆಶ್ ಟಿ20 ರಂಗ ಸ್ಪರ್ಧೆಯ ಮುಕ್ತಾಯ ಸಮಾರಂಭ ಏಪ್ರಿಲ್ 3, 2022, ನಾಣಿ ಅಂಗಳ ದಲ್ಲಿ ನಡೆಯಿತು.  ಮುಖ್ಯ ಅಥಿತಿಗಳು ಶ್ರೀ ಟಿ ಏನ್ ಸೀತಾರಾಮ್, ಶ್ರೀ ಸಿಹಿ ಕಹಿ ಚಂದ್ರು ಮತ್ತು ಶ್ರೀ ರಘು ದೀಕ್ಷಿತ್

ಪ್ರಕಸಂಗೆ ಕಳೆದ 21 ವರ್ಷಗಳಿಂದ ನೀವು ನೀಡಿದ ಪ್ರೋತ್ಸಾಹಕ್ಕೆ ನಾವು ಚಿರಋಣಿ.  ಕಲಾಸೌಧದ ಕಾಲದಲ್ಲಿ ನಿಮ್ಮ ಹಾರೈಕೆಯನ್ನು ನಾವಿನ್ನು ಮರೆತಿಲ್ಲ.  ಪ್ರಕಸಂಗೆ ಇಪ್ಪತ್ತು ತುಂಬಿದ ಸಂಧರ್ಭದಲ್ಲಿ ಕೋವಿಡ್ ಕಾಲದಲ್ಲಿ ಕಾಣೆಯಾಗಿದ್ದ ನಾಟಕ ಚಟುವಟಿಕೆಗಳನ್ನು ಹುರುದುಂಬಿಸಲು ರಿಫ್ರೆಶ್ ಟಿ20 ಅನ್ನೋ ಸ್ಪರ್ಧೆಯನ್ನು ಮಾರ್ಚ್ 12 & 13ರಂದು ಏರ್ಪಡಿಸಿ ಭಾಗವಹಿಸಿದ ತಂಡಗಳಲ್ಲಿ ಮೂರು ತಂಡಗಳಿಗೆ ಪ್ರಶಸ್ತಿ ನೀಡಲಾಯಿತು.    

ನಾಟಕ ಸ್ಫರ್ಧೆಯ ಒಟ್ಟು ಬಹುಮಾನದ ಮೊತ್ತ ₹ 35000, ಮೊದಲ ಬಹುಮಾನ ₹ 20000 ಪಡೆದ ಪ್ರವರ ತಂಡವು "ಒಂದರೊಳಗಿನ್ನೆರಡು" ನಾಟಕವನ್ನು ಪ್ರದರ್ಶಿಸಿತು.  ಎರಡನೇ ಬಹುಮಾನ ₹ 10000 ಪಡೆದ ವ್ಯೋಮಾ ತಂಡವು "ಸಿಕ್ದೋರ್ಗಾ ಸೀರುಂಡೆ" ನಾಟಕವನ್ನು ಪ್ರದರ್ಶಿಸಿತು ಮತ್ತು ಮೂರನೇ ಬಹುಮಾನ ₹ 5000 ಪಡೆದ ಬೆಂಗಳೂರು ಥೀಯೇಟರ್ ಎನ್ಸೆಮ್ಬಲ್ "ಬೂದು" ನಾಟಕವನ್ನು ಪ್ರದರ್ಶಿಸಿತು. ಸ್ಪರ್ಧೆಯ ತೀರ್ಪುಗಾರಲ್ಲದೆ, ಪ್ರೇಕ್ಷಕರೂ ಕೂಡ ತಮ್ಮ ವೋಟ್ ಹಾಕುವಮೂಲಕ ನಾಟಕಗಳ ತೀರ್ಪು ನೀಡಿದ್ದರು. ಒಟ್ಟು 1672 ಮತಗಳನ್ನು ಮೌಲ್ಯಮಾಪನ ಮಾಡಿ ಈ ತೀರ್ಪನ್ನು ನೀಡಲಾಯಿತು.  

ಇವಲ್ಲದೇ ಕೆಳಗಿನ ಜನಪ್ರಿಯ ಪ್ರಶಸ್ತಿಗಳನ್ನೂ ನೀಡಲಾಯಿತು 

ಸ್ಪರ್ಧೆಗೆ 47 ಅರ್ಜಿಗಳು ಬಂದವು, ಅದರಲ್ಲಿ 27ಕ್ಕೆ ಆಹ್ವಾನ ಕಳಿಸಿದೆವು ಮತ್ತು ಅದರಲ್ಲಿ 24 ಜನ ಪ್ರದರ್ಶನ ನೀಡಲು ಒಪ್ಪಿದರು, ಸ್ಪರ್ಧೆಯಲ್ಲಿ 18 ನಾಟಕಗಳ ಪ್ರದರ್ಶನವಾಯಿತು.  ಮಿಕ್ಕ ವಿವರಗಳಿಗೆ ಈ ಪುಟಕ್ಕೆ ಭೇಟಿ ನೀಡಿ www.prakasamtrust.org/rt20

ಸಭೆಯನ್ನುದ್ದೇಶಿಸಿ ಮಾತನಾಡಿದ ಟಿ ಏನ್ ಸೀತಾರಾಮ್ ರವರು ಈ ತರಹದ ಕಾರ್ಯಕ್ರಮವನ್ನು ಶ್ಲಾಘಿಸಿ ಈ ಕಿರುನಾಟಕಗಳು ಜಿಂಗಲ್ ಇದ್ದಹಾಗೆ ಮತ್ತು ಜಿಂಗಲ್ ಅನುಭವವೇ ಒಂದು ಶ್ರೇಷ್ಠ ಹಾಡಾಗಿ ಮೂಡಿಬರುವುದು ಎಂದರು.  ಕ್ಲಿಷ್ಟಕರವಾದ ಅಥವಾ ಸುಲಭವಾಗಿ ಪ್ರೇಕ್ಷಕರನ್ನು ಬೋರ್ ಮಾಡುವ ಪರಿಕಲ್ಪನೆಗಳನ್ನು ಈ ಕಿರುನಾಟಕಗಳ ಮೂಲಕ ಸುಲಭವಾಗಿ ಪ್ರಸ್ತುತಪಡಿಸಬಹುದು ಎಂದರು.

ಸಿಹಿ ಕಹಿ ಚಂದ್ರುರವರು ಗೆಲ್ಲುವುದು ಸೋಲುವುದು ಮುಖ್ಯ ಅಲ್ಲ, ನಾಟಕವೇ ಮುಖ್ಯ ಎಂದು ಎಲ್ಲರನ್ನೂ ಅಭಿನಂದಿಸಿದರು.  ಈ ಕಿರುನಾಟಕಗಳ ಮುಖಾಂತರ ದೊಡ್ಡ ನಾಟಕಗಳನ್ನು ಮಾಡುವ ಆತ್ಮವಿಶ್ವಾಸ ಮೂಡುತ್ತದೆ ಎಂದು, ಕಿರುನಾಟಕಗಳು ಒಂದು ಒಳ್ಳೆ ನಾಟಕವನ್ನು ಶ್ರೇಷ್ಠ ನಾಟಕವನ್ನಾಗಿಸಲು ಸಹಾಯಮಾಡುತ್ತದೆ ಎಂದರು. 

ಕೊನೆಯದಾಗಿ ರಘು ದೀಕ್ಷಿತ್ ರವರು ಪ್ರಕಸಂ ಜೊತೆಗಿನ ಸಹಯೋಗವನ್ನು ನೆನೆಯುತ್ತಾ ಹೊಸ ವೇದೇಕೆಯನ್ನು ಸೃಷ್ಠಿ ಮಾಡಿದ್ದಕ್ಕೆ ಹಾರೈಸಿದರು.  ಈ ತರಹದ ಪ್ರಯೋಗಗಳಿಂದ ಪ್ರದರ್ಶನ ಕಲೆಯನ್ನು ವೃತ್ತಿ ಮಾಡಿಕೊಳ್ಳುವ ಜನರಿಗೆ ಆಗುವ ಅನುಕೂಲವನ್ನು ಉಲ್ಲೇಖಿಸಿ ಸಿನೆಮಾ ರಂಗಕ್ಕೆ ತರಬೇತಿಯೊಂದಿಗೆ ಬರುವ ಪ್ರತಿಭೆಗಳನ್ನು ನೆನೆದರು.   

ಈ ಕಾರ್ಯಕ್ರಮ ಯಶಸ್ವಿಯಾಗಲು ನಮಗೆ ಸಹಕಾರ ನೀಡಿದ ಆರೋಗ್ಯ ಸೇವಾ, ನ್ಯೂಸ್ ಫಸ್ಟ್ ಮತ್ತು ಸ್ವಾದಿಷ್ಟಮ್ ಅವರಿಗೆ ಧನ್ಯವಾದಗಳು.

ಸ್ಫರ್ಧೆಯ ಎಲ್ಲಾ ಖರ್ಚು ಮತ್ತು ಬಹುಮಾನದ ಹಣ ಕೊಡುತ್ತಿರುವ ಅರೋಗ್ಯ ಸೇವಾ ಸಂಸ್ಥೆಯು ವೈದ್ಯಕೀಯ ರಂಗದಲ್ಲಿ ಇರುವ ಎಲ್ಲಾ ಕೆಲಸಗಾರರಲ್ಲೂ ಸೇವೆಯ ಮನೋಭಾವವನ್ನು ರೂಡಿಸುವುದನ್ನು ಗುರಿಯಾಗಿಸಿಕೊಂಡಿದೆ.  ಅಂತರರಾಷ್ಟ್ರೀಯ ವಲಯದಲ್ಲಿ ಹೆಸರುಮಾಡಿರುವ ಈ ಸಂಸ್ಥೆಯ ಹೆಚ್ಚಿನ ವಿವರಗಳನ್ನು ಅವರ ವೆಬ್ಸೈಟ್ ಮುಖಾಂತರ ಪಡೆಯಬಹುದು - http://www.aarogyaseva.in/

ನ್ಯೂಸ್ 1st ಸಂಸ್ಥೆಯು ನಮ್ಮ ಎಲ್ಲಾ ನಾಟಕಗಳ ರೆಕಾರ್ಡಿಂಗ್ ಮಾಡಿ ಕೊಡುವುದಲ್ಲದೇ ನಮ್ಮ ಕಾರ್ಯಕ್ರಮದ ಅಚ್ಚುಕಟ್ಟು ಕವರೇಜ್ ಮಾಡಿಕೊಡಲು ಒಪ್ಪಿದ್ದಾರೆ, ಅವರ ಮಾಹಿತಿಗೆ ಈ ವೆಬ್ಸೈಟ್ ನೋಡಿ - https://newsfirstlive.com/

ನಮ್ಮ ತಂಡದ ಎಲ್ಲಾ ಸ್ವಯಂ ಸೇವಕರಿಗೂ ಮತ್ತು ಸ್ಪರ್ಧೆಯ ಸಿಬ್ಬಂದಿಗೆ ಉಪಹಾರ ಮತ್ತು ಪಾನೀಯಗಳ ವ್ಯವಸ್ಥೆ ಮಾಡಿದ ಸ್ವಾದಿಷ್ಟಮ್ ತಂಡದ ನಿಖಿಲ್ ಮತ್ತು ಧೀರಜ್ ರವರಿಗೆ ಧನ್ಯವಾದಗಳು.

English Press Release

Dear Media Patron,

What: #RefreshT20 Short Play Theatre Competition Closing Ceremony

Where: Naani Angala Suchitra Film Society

When: Sunday, April 3, 2022

Who: Prakasam (Pradarshana Kala Samsthe)

Why: Prakasam celebrating 20th birthday

How: We thank you for your support over the past 21 years to Prakasam’s effort and especially remember your support during #SaveKalasoudha times.  Post the pandemic all performing arts got hit.  To revive the same and get the young theatre enthusiasts & audiences back to stage, we planned RefreshT20 (T for Theatre & 20 for number of plays & duration) on March 12 & 13, a festival of short plays. 

Total prize money of the festival is 35000, Pravara Theatre for their play Ondharolge inyeradu took ₹ 20000, first runner up Vyoma Actors Studio for their play Sikdhorga seerunde took ₹ 10000 and second runner Bengaluru Theatre Ensemble for their play Budhu took ₹ 5000 INR.  Other than these, popular awards were given away as follows...
There were 47 entries, shortlisted to 27 who got invited to perform, 24 accepted the invitation and 18 shows finally happened on the festival date. For all further info kindly visit www.prakasamtrust.org/rt20

The chief guests addressing the gathering had this to say:

TN Seetharam: showing his appreciation to the ensemble of short plays he said "short plays are like jingles and this is how a great song is born.  with such short experiments concepts which could bore the audiences can be presented with ease & encouraged teams to make it a practice".

Sihi Kahi Chandru: Congratulating all winners he stressed that winning or losing is not important only the production is important.  He added "such experiments encourage us to prepare ourselves for larger canvas and audiences.  This should be the stepping stone in making a good production great".

Raghu Dixit: Remembering his association with Prakasam he said such efforts should more and these will help in creating newer platform for people inclined towards performing arts.  Experience gained through such efforts, will help teams and individuals to pursue future in performing arts field, especially cinema industry.

We would like to thank our esteemed sponsors who have made this competition possible.

Firstly Arogya Seva, who's mission is to to instill the spirit of seva in doctors and the medical fraternity. To provide a structured platform for medical and non-medical professionals, to volunteer their time and skills, and strengthen the healthcare system.  They have sponsored all the cost of the competition and have given us the entire prize money.  We are eternally grateful and for further information about them please visit - http://www.aarogyaseva.in/

News 1st have agreed not only to cover our event but also to record our play's to be showcased to the world.  Further information on the company is here - https://newsfirstlive.com/

We would like to thank Nikhil & Dheeraj of Swadishtam who have agreed to sponsor refreshments to the volunteers and staff of #RefreshT20 


Comments

Popular posts from this blog

Prakasam Productions

  ಕಲಾ ಕೃಷಿ - Agriculture of Culture ಕಲಾ ಕೃಷಿ Kalaa Krushi, all the Performing Arts activities we do for Pradarshana Kalaa Samsthe (Prakasam).  This page is the index of all our endeavors.  We would appreciate your Feedback on our activities and request you to support our endeavors. Check out our dedicated & selfless team, our Team Activities & Join Hands with us for Kala Krushi.  If you are interested in joining us here is the WHATSAPP COMMUNITY LINK or mail us at prakasamtrust@gmail.com   Productions List: Home Theatre Toyota Road Awareness Program Jalpa Sanamathe Kathakhanda Sathya Nithya Isila Road awareness skit for Toyota   Varalakshmi Avaantara Caronammana Krupe Meenina Hejje Nivaarya Sahana Murthy Mahapeede Mahablu Masthi Kallu Namma Nimmolagobba Mr. Shambho Shiva Shankara Bhava Navanaveena Avalavanu Avanavalu Gulle Nari Ugalageete Bogie Katha Sangama Sairandhri Vaave Kattalu* Yaksha* Rayakota 1858* 13 Margosa Mahal Hosabelaku Doos...

Sridevi Mahatme

Sridevi Mahatme Kannada Comedy Play "Sridevi Mahathme" a short story by Vasudendhra, based out of an apartment complex in Bangalore. It addresses the issues of people and their perceptions of a simple incident and addresses them in a witty & comical way.  This holds the mirror to the current scenario of our lifestyle and living morals. CAST: Surabhi, Vijay, ChandraKeerthi. CREW: Stage design: Shashidhar Adappa Lights: Mustafa Music direction: Gajjanana.T.Naik DIRECTION: MANGALA.N Sridevi Mahatme Poster

Meghashree's Profile

Contact: 7259998222/333 or mail prakasamtrust@gmail.com Meghashree hails from a family of Legendary Theatre and Motion Picture Personalities. She possess Diploma in Fashion Technology from Rajiv Gandhi Memorial Polytechnic. Blessed as the Grand daughter of Sri. C. Honnappa Bhagavathar - a stalwart in the motion pictures of Kannada Cinema, who was also renowned as the '' Gaana Kala Bhushana '' in Tamil and Kannada. He is bestowed with the Karnataka Nataka Academy Awards, Gold medals for his extraordinary talent as a great musician and for his splendid style of  ''Harikatha''. His name is synonymously with the splendid folk art / music which is now moving into the oblivion. Professional Details : Theatre : Active member of Benaka and Pra.Ka.Sam theatre  troupes. Plays Performed are Gokula Nirgamana, Jokumaraswamy, Katthale Belaku, Hayavadhana, Hosabelaku, Katha Sangama, Chandrahasa, Kaakana Kote, Pramilarjuneeyam, Bogie...... T.V Serials...