Here is what our Interns for the Doosra play during April, May & June 2018 had to say about the internship program... PS: They are unedited & published as received... ಶೂನ್ಯದಿಂದ ಶತಕದೆಡೆಗೆ.... -ವಿಶ್ವಮೂರ್ತಿ ಹವಾಲ್ದಾರ ಪ್ರಕಸಂ - ಪ್ರದರ್ಶನ ಕಲಾ ಸಂಸ್ಥೆಯ ಹಲವಾರು ನಾಟಕಗಳನ್ನು ಕಳೆದ ಮೂರು ನಾಲ್ಕು ವರ್ಷಗಳಿಂದ ನೋಡುತ್ತಿದ್ದೆ ... ಯಾವಾಗ ಇದರ ಭಾಗವಾಗಿ ( intern) ಸೇರಲು ಅವಕಾಶವಿದೆ ಎಂದು ತಿಳಿದಾಗ ಬಹಳ ಖುಷಿಪಟ್ಟೆ .. ಯಾವುದೇ ಫಲಪ್ರದವನ್ನು ಬಯಸದೇ ನಾನು ಪ್ರಕಸಂನ ಭಾಗವಾದೆ ... ದೂಸ್ರಾದ ಭಾಗವಾಗಿ ಕಲಿತ್ತಿದ್ದು ಶೂನ್ಯದಿಂದ ಶತಕದೆಡೆಗೆ ಚಲಿಸಿದ ಅಟಗಾರನ ಹಾಗೆ ... ಕನ್ನಡವನ್ನು ಚೆನ್ನಾಗಿ ಓದಬಲ್ಲೆ ಎಂದು ತಿಳಿದಿದ್ದೆ ನನಗೆ ಇಲ್ಲಿ ವರವಾಗಿದ್ದು ಅದೇ ... ಪ್ರತಿ ಪಾತ್ರದ ಸಂಭಾಷಣೆಗಳನ್ನು ಓದುತ್ತಾ ಓದುತ್ತಾ ನಾನು ನಾಟಕದ ಭಾಗವಾಗಿ ಹೋದೆ ... ನಾಟಕ ನೋಡುವುದು ಸುಲಭ ಅದರೆ ಮಾಡುವುದು ಸುಲಭವಲ್ಲ .. ಏನೆಲ್ಲಾ ಬೇಕು ಒಂದು ನಾಟಕ ಮಾಡಲು ಅಬ್ಬಾ .. ತರೆಯ ಹಿಂದಿನ ಕೆಲಸಗಳು ಒಂದಾ ಎರಡು ಎಲ್ಲವನ್ನು ಕಲಿಸಿದ ಪ್ರಕಸಂನ ಎಲ್ಲರಿಗೂ ಶರಣು ಶರಣು .. ಶೂನ್ಯದಿಂದ ಶತಕದೆಡೆಗೆ ಏನೂ ಇಲ್ಲದೇ ಬಂದು ಎಲ್ಲವನ್ನೂ ಕಲಿತ ಸರಿಸುಮಾರು ೫೦ ದಿನಗಳ ಪ್ರಯಾಣ ನನ್ನ ದಿನಂಪ್ರತಿ ಒಂದು ಭಾಗವೇ ಆಗಿತ್ತು .... ಕೊನೆಯ ಮಾತು- ಮಾಡಿದ ಸಣ್ಣ ಪುಟ್ಟ ತಪ್ಪುಗಳನ್ನು...
ಪ್ರದರ್ಶನ ಕಲಾ ಸಂಸ್ಥೆ | prakasamtrust@gmail.com