Chetana Thirthahalli ನಾಟಕದಬಗ್ಗೆ ಕವಿಯತ್ರಿಯ ಅನುಭವಾನಿಸಿಕೆ: ಯಾವ ಯಾವುದೋ ಅನುಭವಗಳು ಕ್ಷಣದಲ್ಲಿ ಕಿಡಿ ಹೊತ್ತಿಸಿದಂತಾಗಿ ಅಕ್ಷರ ರೂಪ ತಳೆದಿದ್ದವು. ಅವನ್ನು ಅಲೈನ್ ಮಾಡುವ ರೀತಿಯಿಂದ ಕವಿತೆ ಎನ್ನುವ ಹೆಸರನ್ನೂ ಪಡೆದಿದ್ದವು. ಇವೇ ಸಾಲುಗಳನ್ನು ಮತ್ಯಾವಾಗಲೋ ಓದಿದಾಗ ಮತ್ತೊಂದೇ ಅರ್ಥ ಅಲ್ಲಿರುತ್ತಿತ್ತು. ಬರೆಯುವಾಗಿನ ಭಾವದ ಬದಲು ಬೇರೊಂದು ಅಲ್ಲಿ ಕಾಣುತ್ತಿತ್ತು. ಹಾಗೆಯೇ ಅವನ್ನು ಓದಿದ ಕೆಲವರು ತಮ್ಮ ಅರ್ಥಗಳನ್ನು ಶೇರ‍್ ಮಾಡಿಕೊಂಡಿದ್ದುಂಟು. ಬಹುತೇಕ ಈ ಎಲ್ಲ ಕವಿತೆಗಳು ಸಂಬಂಧಗಳ ಜಾಲದ ತುಣುಕುಗಳೇ ಆಗಿದ್ದವು. ಹೊತ್ತು ಹೊತ್ತಲ್ಲೆ ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಆಗಿ ಕಾಣಿಸಿಕೊಂಡಿದ್ದ ಈ ಕವಿತೆಗಳಲ್ಲಿ ಕೆಲವಕ್ಕೆ ಗೆಳೆಯ, ರಂಗಭೂಮಿಯಲ್ಲಿ ಸಾಕಷ್ಟು ಪರಿಶ್ರಮವಿರುವ ಪಿ.ಡಿ. ಸತೀಶ್ ತಮಾಷೆಗೆಂದು ’ಪ್ರತಿ ಕವಿತೆ’ಗಳನ್ನು ಬರೆದರು. ಹೀಗೆ ಹುಟ್ಟಿಕೊಂಡ ಕಾವ್ಯಸಂಭಾಷಣೆಯೇ ನಾಟಕ ರೂಪಿಸುವ ಯೋಚನೆಗೆ ಪ್ರೇರಣೆಯಾಯ್ತು. ಅಚ್ಚರಿಯೆಂಬಂತೆ ಆಯ್ದ ಎಪ್ಪತ್ತನಾಲ್ಕು ಕವಿತೆಗಳಿಗೆ ಸತೀಶ್ ಪ್ರತಿಕವಿತೆಗಳನ್ನು ಬರೆದಿದ್ದಾರೆ. ಈ ಪ್ರತಿಕವಿತೆಗಳು ಬದುಕನ್ನು ಕಾಣಬೇಕಾದ ಬಗೆಯನ್ನು ನಿರ್ದೇಶಿಸುವಂತಿವೆ. ಕ್ಷಣಿಕ ಭಾವನೆಗಳನ್ನು ಬೆನ್ನ ಮೇಲೆ ಹೊತ್ತು ನೋವನ್ನೆ ಸುಖಿಸುವ ಸ್ವಾನುಕಂಪದ ಮನಸ್ಸುಗಳಿಗೆ ಈ ಪ್ರತಿಕವಿತೆಗಳು ಮದ್ದಿನಂತಿವೆ. ಜೀವನದ ನೈಜತೆ ಎಲ್ಲವನ್ನೂ ಒಪ್ಪಿಕೊಂಡು ಜೊತೆಯಾಗಿ ಹರಿಯುವ ಸಂತಸದಲ್ಲಿದೆಯೇ ಹೊರತು ನಿಂತಲ್ಲ...
ಪ್ರದರ್ಶನ ಕಲಾ ಸಂಸ್ಥೆ | prakasamtrust@gmail.com