Skip to main content

Posts

Showing posts with the label IT

"ಪೂರ್ವರಂಗ’ ಅಭಿನಯ ಕಾರ್ಯಾಗಾರ

ಮತ್ತೆ ‘ಪೂರ್ವರಂಗ’ ಆರಂಭ..! ಬೇರೆ ಬೇರೆ ಹಂತಗಳಲ್ಲಿ ಅಭಿನಯ ಕಾರ್ಯಾಗಾರ! ಜುಲೈ 5 ರಿಂದ 19ನೇ ತಾರೀಖಿನವರಿಗೆ ಸಂಜೆ 6.30 ರಿಂದ 8.30 ರವರೆಗೆ ಸ್ಥಳ : ‘ಸಂಚಾರಿ ಥಿಯೇಟರ್ ಅಂಗಳ’ ‘ಕೆ. ಹೆಚ್.ಕಲಾಸೌಧ’ದ ಕೆಳಗೆ (ಹನುಮಂತನಗರ) ನೊಂದಾಯಿಸಲು ಸಂಪರ್ಕಿಸಿ: 88843 45569 sancharitheatremail@gmail.com ರಂಗಾಭಿನಯವೆನ್ನುವುದು ಒಂದು ಗಂಭೀರವಾದ ಸಂವಹನೆಯ ಮಾಧ್ಯಮ. ಕಲಾವಿದನೊಬ್ಬ ರಂಗದ ಮೇಲೆ ತನ್ನ ದೇಹ, ಧ್ವನಿ, ಮನಸ್ಸು, ಬುದ್ಧಿಗಳನ್ನು ಬಳಸಿಕೊಂಡು ಸಂವಹನೆಯನ್ನು ನಡೆಸಬೇಕಾಗುತ್ತದೆ. ಇಲ್ಲಿ ಧ್ವನಿ, ದೇಹ ಮನಸು, ಬುದ್ಧಿ-ಭಾವಗಳನ್ನು ನಿಯಮಿತವಾಗಿ ನಿಯಂತ್ರಣದಲ್ಲಿ ಇಟ್ಟುಕೊಂಡು ಕಾರ್ಯವನ್ನು ಸಾಧಿಸಬೇಕಾಗುತ್ತದೆ. ಜೊತೆಜೊತೆಯಲ್ಲೇ ಅದು ಪ್ರೇಕ್ಷಕರನ್ನೂ ತಲುಪಬೇಕು. ಈ ಕಾರ್ಯ ಮೇಲ್ನೋಟಕ್ಕೆ ತೀರ ಸುಲಭ ಎಂದೆನಿಸಿದರೂ ನಂತರದಲ್ಲಿ ಸಂಕೀರ್ಣವಾಗುತ್ತ ಸಾಗುತ್ತದೆ. ಇದಕ್ಕೆಂದೆ ಬೇರೆ ಬೇರೆ ವಿಧಾನಗಳು, ಸಿದ್ಧಾಂತಗಳು, ಶೈಲಿಗಳು ಹುಟ್ಟಿಕೊಂಡಿವೆ. ಕಾಲಕಾಲಕ್ಕೆ ಅದು ಬದಲಾಗುತ್ತಲೂ ಸಾಗಿದೆ. ಹೀಗೆ ಭಿನ್ನ ಅಭಿನಯ ದಾರಿ, ಶೈಲಿ, ಸಿದ್ಧಾಂತಗಳಿಗೆ ತಮ್ಮನ್ನು ತೆರೆದುಕೊಳ್ಳಲು ಅಭ್ಯಾಸ ಮಾಡಲು ತರಬೇತಿಯು ಮುಖ್ಯ ಪಾತ್ರ ವಹಿಸುತ್ತದೆ. ರೂಡಿಗತವಾದ ದೈಹಿಕ ಚಲನೆಗಳು, ನಿಲುವು, ಭಂಗಿ, ಧ್ವನಿ-ಭಾಷೆಯ ವ್ಯಾಯಾಮಗಳು, ಉಚ್ಚಾರಗಳು ವಾಚಿಕ ಮಾದರಿಗಳ ಜೊತೆಜೊತೆಯಲ್ಲೇ ಅದನ್ನು ಮೀರಿ ನಿಲ್ಲುವ ಅಮೂರ್ತವಾದ, ಶೈಲೀಕೃತವಾದ ವಿಧಾನಗಳನ...