Skip to main content

Posts

Showing posts with the label camera

Intern Speak: Workshop Film Shoot

Ankita: ದಿನಾಂಕ 16 ಮತ್ತು 17 ಸಪ್ಟೆಂಬರ್‌ 2021 ಪ್ರಕಾಸಮ್‌ ತಂಡದವರು ಚಲನಚಿತ್ರ ಕಾರ್ಯಗಾರ ಇಂಟರ್ನ್ಸಶಿಪ್‌ಗಾಗಿ 4 ಆಸಕ್ತಿವುಳ್ಳ ಸದಸ್ಯರು ಬೇಕು ಅಂತಾ ಜಾಹೀರಾತು ಕೊಡ್ತಾರೆ. ನನಗೆ ಮಾಧ್ಯಮದಲ್ಲಿ ಕೆಲಸ ಮಾಡ್ಬೇಕು ಅನ್ನೋದು ಆಸೆ ಮತ್ತು ಉತ್ಸಾಹ. ಹಾಗಾಗಿ ನನ್ನ ಹೆಸರನ್ನ ನೋಂದಾಯಿಸಿಕೊಳ್ತಿನಿ. ಅಲ್ಲಿ ಶೂಟಿಂಗ್‌ ಸ್ಥಳಕ್ಕೆ ಹೋದಾಗ ನಿರ್ದೇಶಕ PD ಸತೀಸ್‌ ಚಂದ್ರ ಸರ್ ಅವರು ಮೂಲ ನಿಯಮಗಳನ್ನ ವಿವರಿಸಿ ಶೂಟಿಂಗ್‌ ಶುರು ಮಾಡ್ತಾರೆ. ಮಾಧ್ಯಮ ಹೊಸದು ಅದರಲ್ಲೂ ನೇರ ಕಲಿಕೆ. ಎರಡು ದಿನದಲ್ಲಿ ಇಷ್ಟೆಲ್ಲ ಕಲಿಬಹುದಾ ಅನ್ನೋ ಮಟ್ಟಕ್ಕೆ ನಮಗೆ ಕಲಿಯೋದಕ್ಕೆ ಸಿಗುತ್ತೆ. ದೃಶ್ಯಕ್ಕೆ ತಕ್ಕ ಸ್ಥಳದ ಆಯ್ಕೆ, ವೇಷಭೂಷಣ, ಕ್ಯಾಮೆರಾ angle, ದೃಶ್ಯವನ್ನು ವಿವರಿಸುವ ಬಗ್ಗೆ, ಸಂಭಾಷಣೆ ಹೇಗಿರ್ಬೇಕು, ದೃಶ್ಯವನ್ನು ಯಾವ ರೀತಿ ಸೆರೆ ಹಿಡಿತಾರೆ, ವಿವಿಧ angleಗಳಲ್ಲಿ ಸೆರೆ ಹಿಡಿಯುವ ಬಗ್ಗೆ, ಮುಖ್ಯವಾಗಿ ತಾಳ್ಮೆಯನ್ನು ಕಲಿಸುತ್ತೆ. ಅಲ್ಲಿ ಅದು ಒಬ್ಬರ ಸಮಯ ಆಗಿರೋದಿಲ್ಲ ಸಮಯ ಅನ್ನೋದು ಅಲ್ಲಿ ಪ್ರತಿಯೊಬ್ಬರ ಸಮಯ ಆಗಿರುತ್ತೆ. ಒಬ್ಬರೂ ಕೂಡ ಸಮಯವನ್ನು ವ್ಯಯ ಮಾಡದೆ ಕೆಲಸ ಮಾಡೋ ಜಾಗ ಅದು. ಸಮಯದ ಮಹತ್ವವನ್ನು ತಿಳಿಸಿಕೊಟ್ಟಿದೆ. ನಾನು ಏನು ಅಂದುಕೊಂಡಿದ್ನೋ ಅದಕ್ಕಿಂತ ಹೆಚ್ಚಿನದಾಗಿ ನನಗೆ ತಿಳಿಯೋದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಪ್ರಕಾಸಮ್‌ ತಂಡ. ಇದೊಂದು ಅತ್ಯಧ್ಬುತವಾದ ಅನುಭವ. ತಂಡದ ಎಲ್ಲಾ ಸದಸ್ಯರಿಗೂ ನನ್ನ ಹೃದಯ ಪೂರ್ವಕ ಧನ್ಯವಾದಗಳು. ಮ...