Skip to main content

Posts

Showing posts from October, 2024

Jalpa | ಜಲ್ಪ

ಪ್ರಕಸಂ ಅರ್ಪಿಸುವ "ಜಲ್ಪ" ಜಲ್ಪ ಎಂಬ ಹೆಸರು ಕೇಳಿದ ತಕ್ಷಣ ನಮ್ಮ ಮನಕ್ಕೆ ಬರುವ ಪ್ರಶ್ನೆ, ಏನಿದು? ಕನ್ನಡದ ಪದವೇ? ಎಂಬುದು.  ಈ ಪದದ ಸರಳಾರ್ಥ "ಸಂವೇದನಾಶೀಲ ಮಾತು". ಅರ್ಥೈಸಿಕೊಂಡಾಗ ಜಲ್ಪವೆಂದರೆ "ಒಬ್ಬರ ಸಿದ್ಧಾಂತವನ್ನು ಸ್ಥಾಪಿಸಲು (ಇನ್ನೊಬ್ಬರನ್ನು ಖಂಡಿಸಿಯಾದರೂ) ನಡೆಸುವ ವಿವಾದಾತ್ಮಕ ಚರ್ಚೆ. ಎಲ್ಲರಿಗೂ ಬೇಕಾದ, ಅಗತ್ಯವಾಗಿರುವ ಸಾಮಾಜಿಕ ನ್ಯಾಯ ಪದ್ದತಿಗಳಿಗೆ ಇಂದೂ ಸವಾಲಾಗಿರುವ "ದಯಾಮರಣ" ನಮ್ಮ ನಾಟಕವನ್ನು ನಡೆಸಿಕೊಂಡು ಹೋಗುತ್ತದೆ. ಮುರಿದುಬಿದ್ದ ಒಂದು ಕುಟುಂಬದ ಕಥೆಯನ್ನು ನಿಮ್ಮ ಮುಂದಿಡಲು ಬರುತ್ತಿದ್ದೇವೆ. ಪ್ರಕಸಂನ ನಟರಿಗೆಲ್ಲ ನಡೆದಾಡುವ ಶಾಲೆಯಾಗಿರುವ ಸಿಹಿ ಕಹಿ ಚಂದ್ರುರವರು ಮುಖ್ಯಪಾತ್ರದಲ್ಲಿ ನಿಮ್ಮನ್ನು ರಂಜಿಸಲಿದ್ದಾರೆ. ಬನ್ನಿ ದಯೆಯೇ ಧರ್ಮದ ಮೂಲದ ವ್ಯಾಖ್ಯಾನ ಮಾಡೋಣ.  "ನಿಮ್ಮ ಕರ್ಮವನ್ನು ಬಿಟ್ಟು, ಇತರರನ್ನು ಮೋಕ್ಷಕ್ಕಾಗಿ ಅವಲಂಬಿಸಬೇಡಿ" - ಬುದ್ಧ "ದಯವಿಲ್ಲದ ಧರ್ಮವದಾವುದಯ್ಯ, ದಯವೇ ಧರ್ಮದ ಮೂಲವಯ್ಯ" - ಬಸವಣ್ಣನವರು Prakasam Presents "Jalpa" The word "Jalpa" makes us ask questions like, what is it? Is it even a Kannada word? The literal meaning of this word is "sensible speech". It can be defined as "a controversial debate condu...