ಆತ್ಮೀಯ ಸ್ನೇಹಿತರೇ,
ಕನ್ನಡ ನಾಡಿನ ಹೆಮ್ಮೆಯ ಲೇಖಕಿ ವೈದೇಹಿಯವರ ಕಾವ್ಯಮಾಲಿಕೆಯನ್ನಿಟ್ಟುಕೊಂಡು `ವ್ಯಾನಿಟಿ ಬ್ಯಾಗ್' ಅನ್ನುವ ನಾಟಕಮಾಡಲಾಗಿದ್ದು, ಈ ನಾಟಕ ಕನ್ನಡ ರಂಗಭೂಮಿಯಲ್ಲಿ ಅಪರೂಪದ ಪ್ರಯೋಗವಾಗಿದ್ದು, ಕರ್ನಾಟಕದ ಹಲವು ಜಿಲ್ಲೆಗಳಲ್ಲಿಯಶಸ್ವಿಯಾಗಿ ಪ್ರದರ್ಶನವಾಗಿದೆ. ಸಂಚಾರಿ ಥಿಯೇಟರ್ನವರು ಅಭಿನಯಿಸಿರುವ `ವ್ಯಾನಿಟಿ ಬ್ಯಾಗ್' ನಾಟಕಕ್ಕೆ ರಂಗಕರ್ಮಿ ಮಂಗಳಾ.ಎನ್ ಅವರ ದಕ್ಷ ನಿರ್ದೇಶನವಿದೆ. ಎಲ್ಲೆಡೆ ಯಶಸ್ವಿ ಪ್ರದರ್ಶನ ಕಂಡಿರುವ `ವ್ಯಾನಿಟಿ ಬ್ಯಾಗ್' ಈಗ ಬೆಂಗಳೂರಿನರಂಗಪ್ರಿಯರಿಗಾಗಿ ಹನುಮಂತರಂಗದ ಕೆ.ಹೆಚ್.ಕಲಾಸೌಧದಲ್ಲಿ ಪ್ರದರ್ಶನಗೊಳ್ಳಲಿದೆ. ನಾಟಕ ಪ್ರದರ್ಶನವನ್ನು `ಸರ್ವಸ್ವ'ತಂಡವು ಹಮ್ಮಿಕೊಂಡಿದೆ.
`ಸರ್ವಸ್ವ' ಸಂಸ್ಥೆಯ ಉದ್ಘಾಟನೆ
ಈ ನಾಟಕ ಪ್ರದರ್ಶನದ ಜೊತೆಗೆ `ಸರ್ವಸ್ವ' ಅನ್ನುವ ರಂಗತಂಡದ ಸಂಸ್ಥೆಯು ಕೂಡ ಉದ್ಘಾಟನೆಯಾಗಲಿದೆ. ರಂಗಭೂಮಿ,ನೃತ್ಯ, ಸಂಗೀತ, ಸಿನಿಮಾ ಇನ್ನು ಹಲವು ಕಲಾ ಮಾಧ್ಯಮಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವ, ಕಾರ್ಯಕ್ರಮಗಳನ್ನುಹಮ್ಮಿಕೊಳ್ಳುವ, ಆ ಮೂಲಕ ಸಾಂಸ್ಕೃತಿಕ ಜಗತ್ತಿನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು, ನಾಟಕಗಳನ್ನು ಮಾಡುವ ಅಪೂರ್ವಯೋಜನೆಗಳೊಂದಿಗೆ `ಸರ್ವಸ್ವ' ತಂಡವು ಪ್ರಾರಂಭವಾಗುತ್ತಿದೆ. ಈಗಾಗಲೇ ರಂಗಭೂಮಿ, ನೃತ್ಯ ಇನ್ನು ಹಲವು ಮನರಂಜನಾಮಾಧ್ಯಮಗಳಲ್ಲಿ ಕೆಲಸ ಮಾಡಿ, ಆ ನೆಲದಲ್ಲಿ ಅಲ್ಪಸ್ವಲ್ಪ ಕೃಷಿ ಮಾಡಿ, ಅನುಭವ ಪಡೆದ ಸಮಾನ ಮನಸ್ಕರ ತಂಡವು`ಸರ್ವಸ್ವ'ದಲ್ಲಿ ಸದಸ್ಯರಾಗಿದ್ದಾರೆ. ಒಟ್ಟಾರೆಯಾಗಿ ಕಲಾಮಾಧ್ಯಮದ ಎಲ್ಲ ವಿಭಾಗಗಳಲ್ಲಿ ಎಷ್ಟು ಸಕ್ರೀಯವಾಗಿ ದುಡಿಯಲಿಕ್ಕೆಸಾಧ್ಯವಾಗುತ್ತೋ ಅಷ್ಟು ದುಡಿಯುವುದು ಈ ತಂಡದ ಪರಮ ಗುರಿ. ಸಂಸ್ಥೆಯು ಒಳ್ಳೆಯ ಉದ್ದೇಶದೊಂದಿಗೆ ಸಹೃದಯವಾಗಿದುಡಿಯುವ ಮನಸ್ಸುಗಳು, ನಮ್ಮ ಕೆಲಸವನ್ನು ಬೆಂಬಲಿಸುವ ರಂಗಪ್ರಿಯರ ಸಹಕಾರದೊಂದಿಗೆ, ರಂಗಭೂಮಿಯ ಹಿರಿಯರಆಶೀರ್ವಾದ, ಸಲಹೆ ಸೂಚನೆಗಳೊಂದಿಗೆ ಉದ್ಘಾಟನೆಯಾಗುತ್ತಿದೆ.
ಆ ದಿನದ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಸಂಗೀತ ನಿರ್ದೇಶಕರು, ಗೀತರಚನೆಕಾರರು, ಆಗಿರುವ ಕೆ.ಕಲ್ಯಾಣ್, ಸಂಚಾರಿರಂಗತಂಡದ ಮುಖ್ಯಸ್ಥೆಯಾಗಿರುವ ಎನ್.ಮಂಗಳಾ ಹಾಗೂ ಉದ್ಯಮಿಗಳಾದ ಎಂ.ಗೋಪಾಲಕೃಷ್ಣ ಸೋಮಯಾಜಿಯವರುಭಾಗವಹಿಸಲಿದ್ದಾರೆ. `ಸಂಚಾರಿ' ಹಾಗೂ `ಸರ್ವಸ್ವ' ತಂಡದ ಎಲ್ಲ ಸದಸ್ಯರು ಸೇರಲಿದ್ದಾರೆ. ಈ ಕ್ಷಣಗಳಲ್ಲಿ ಸ್ನೇಹಿತರು,ಹಿತೈಷಿಗಳು ಆದಂತಹ ತಾವೆಲ್ಲರೂ ನಮ್ಮೊಂದಿಗೆ ಭಾಗಿಯಾದರೆ ತುಂಬಾ ಚೆನ್ನ ಎಂಬುದು ನಮ್ಮ ಅರಿಕೆ.
ದಿನಾಂಕ : 03, ಆಗಸ್ಟ್ 2013,
ಸಮಯ ಸಾಯಂಕಾಲ 6.30,
ಕೆ. ಹೆಚ್. ಕಲಾಸೌಧ, ಹನುಮಂತನಗರ
ಕಾರ್ಯಕ್ರಮದಲ್ಲಿ ತಾವುಗಳು ಭಾಗವಹಿಸಲಿಕ್ಕೆ, ನಾಟಕವನ್ನು ನೋಡಲಿಕ್ಕೆ, ಟಿಕೇಟ್ಗಳಿಗಾಗಿ ಹಾಗೂ ಇನ್ನಿತರ ಮಾಹಿತಿಗಾಗಿ`ಸರ್ವಸ್ವ' ತಂಡದ ಸಂಸ್ಥಾಪಕರಾಗಿರುವ ನಾಗರಾಜ ಸೋಮಯಾಜಿಯವರನ್ನು ಈ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು.
ಮೊ: 9986474787, 9880046769

Comments
Post a Comment