ಕರೋನಮ್ಮನ ಕೃಪೆ - ಪ್ರಕಸಂನ ಪ್ರಸ್ತುತಿ.
PHOTOS - SHOW 1 | SHOW 2 | SHOW 3 | SHOW 4
ಕರೋನಾದ ಕರಾಳತೆಯಲ್ಲಿ ಮುಳಿಗಿ ಅಳಿದು ಉಳಿದ ನಂತರ ನೆಮ್ಮದಿಯ ನಿಟ್ಟುಸಿರು ಬಿಡುವ ಮಟ್ಟಕ್ಕೆ ತಲುಪಿರುವ ನಾವು ಈಗ ಕರೋನಾದ ಬಗ್ಗೆ ಚರ್ಚಿಸುವ, ವಿಮರ್ಶಿಸುವ ಸಾಹಸ ಮಾಡಿದ್ದೇವೆ. ನಾವು ಕಂಡು ಕೇಳಿ ಅನುಭವಿಸಿರುವ ಸಮದರ್ಭಗಳನ್ನು ಅಳವಡಿಸಿ ಕರೋನ ಹಾಕಿಸಿದ ಕಣ್ಣೀರು, ತಂದಿಟ್ಟ ಆತಂಕ ಹಾಗು ಕಲಿಸಿದ ಪಾಠಗಳ ಅನಾವರಣವೇ ಕರೋನಮ್ಮನ ಕೃಪೆ. ಈ 35 ನಿಮಿಷದ ನಾಟಕದಲ್ಲಿ, ಸಿಸ್ಟಮ್‍ನ ಒಳಗೆ ಸಿಲುಕಿ ಬೇಡವಾದರು ನೋವುಂಡವರ, ಕರೋನ ತೆರೆದಿಟ್ಟ ಅವಕಾಶಗಳಿಂದ ಅಭಿವೃದ್ದಿ ಹೊಂದಿದವರ ಕಥನ ಈ ನಾಟಕ. ಪಿ.ಡಿ. ಸತೀಶ್ ಚಂದ್ರ ನಿರ್ದೇಶನದ ಹಾಗು ಚಂದನ್ ಶಂಕರ್ ರಚನೆಯ ಅನೇಕ ನಾಟಕಗಳಲ್ಲಿ ಇದು ಹೊಚ್ಚ ಹೊಸದು. ಈ ಮುಂಚೆ ಹೊಸಬೆಳಕು, ಮಾರ್ಗೋಸಾ ಮಹಲ್, ಬೋಗಿ, ಸೈರಂಧ್ರೀ, ಕಥಾ ಸಂಗಮ ಅನ್ನೋ ಹೆಸರುವಾಸಿ ನಾಟಕಗಳನ್ನು ವೇದಿಕೆಗೆ ತಂದಿದ್ದಾರೆ.
ಮೊದಲ ಪ್ರದರ್ಶನ, ವ್ಯೋಮಾ ನಾಟಕೋತ್ಸವಕ್ಕಾಗಿ, ಭಾನುವಾರ ಮಾರ್ಚಿ 6, 2022
ತಂಡದ ಪರಿಚಯ
Anchor ಆಗಿ ಪಲ್ಲವಿ/ಪೂಜಾ ಕಶ್ಯಪ್
ಅಭಿಜಿತ್ ಆಗಿ ಶ್ರೀಹರಿ ಕಶ್ಯಪ್
ರಾಗಿಣಿ ಆಗಿ ಮೇಘನ/ಪೂಜಾ ರಾವ್
ಯೋಗಾನಂದ್ ಆಗಿ ನಿಖಿಲ್ ಪಾರ್ಥಸಾರಥಿ
ವಿನುತ ಆಗಿ ರೂಪ ಕೋಮರ್ಲ
ಸಂಗೀತ ಮತ್ತು ಹಾಡು: ನಿಖಿಲ್ ಪಾರ್ಥಸಾರಥಿ
ವಿನ್ಯಾಸ ಮತ್ತು ನಿರ್ದೇಶನ: ಪಿ.ಡಿ. ಸತೀಶ್ ಚಂದ್ರ
ಪಿ.ಡಿ. ಸತೀಶ್ ಚಂದ್ರ, ಪಿ.ಡಿ. ಎಂದೇ ಪರಿಚಿತರು, ಪ್ರಕಸಂ ತಂಡದ ಹಿರಿಯರು. 2001ರಿಂದ ಪ್ರಾರಂಭವಾದ ಪ್ರಕಸಂ ಸಂಸ್ಥೆಯಲ್ಲಿನ ಎಲ್ಲಾ ಪ್ರದರ್ಶನ ಕಲೆಗಳ ಸಾಣೆ ಹಿಡಿದವರು. ಒಂಬತ್ತು ವರ್ಷ ಕಲಾ ಸೌಧವನ್ನು ನಡೆಸಿದ ಅವರು ಅನೇಕ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಮಾಧ್ಯಮ ಮತ್ತು ಪ್ರದರ್ಶನ ಕಲೆಗಳ ಅನೇಕ ಯೋಜನೆ ಹಾಗು ಕೆಲಸಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವೆಲ್ಲರ ನಡುವೆ ಕನ್ನಡ ಚಲನಚಿತ್ರ ಮತ್ತು ಕಿರುತೆರೆಯಲ್ಲಿ ನಟನಾಗಿ ಕೂಡ ಸಕ್ರಿಯರಾಗಿದ್ದಾರೆ. ಅವರನ್ನು ಫೇಸ್ಬುಕ್ ಮುಖಾಂತರ ಸಂಪರ್ಕಿಸಬಹುದು - facebook.com/pdschandra
ರಚನೆ ಮತ್ತು ಸಾಹಿತ್ಯ: ಚಂದನ್ ಶಂಕರ್
ಪ್ರಕಸಂ ತಂಡದ ನಾಟಕಗಳನ್ನು ಬರೆಯುತ್ತ ಬರವಣಿಗೆಯನ್ನು ಪ್ರವೃತ್ತಿಯಾಗಿಸಿಕೊಂಡಿರುವ ಚಂದನ್ ಅವರ ಪ್ರದರ್ಶನವಾಗುತ್ತಿರುವ ಆರನೇ ನಾಟಕ ಕರೋನಮ್ಮನ ಕೃಪೆ. ತನ್ನ ಆಸಕ್ತಿಗಾಗಿ ರಂಗಭುಮಿಯಲ್ಲಿ ತೊಡಗಿಸಿಕೊಂಡು ಬರವಣಿಗೆಯ ಜೊತೆಗೆ ತಾಂತ್ರಿಕವರ್ಗದಲ್ಲಿ, ನಿರ್ದೇಶನ, ನಟನೆ ಹಾಗು ಸಾಹಿತ್ಯ ರಚನೆಕಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಸಿನಿಮಾ ಕಿರುತೆರೆಯಲ್ಲೂ ಹಲವು ವಿಭಾಗಗಳಲ್ಲಿ ದುಡಿದು ಇನ್ನು ಹೆಚ್ಚು ಅವಕಾಶಗಳನ್ನ ಅರಸುತ್ತ ರಂಗಭೂಮಿಯ ಸೇವೆಯನ್ನೂ ಮಾಡುವ ಹಂಬಲವಿರುವ ಪ್ರತಿಭೆ ಚಂದನ್ ಶಂಕರ್. ಅವರನ್ನು ಫೇಸ್ಬುಕ್ ಮುಖಾಂತರ ಸಂಪರ್ಕಿಸಬಹುದು - facebook.com/chandan.shankar.33
For tickets for all the shows on March 6, 12 and 13th , please click the link here https://in.bookmyshow.com/plays/coronammana-krupe/ET00323822
For the show pics, click the following links :
Vyoma Naatakotsava - https://www.facebook.com/media/set/?set=a.5472554759438470&type=3
Day 1 - #Refresh T20 - https://www.facebook.com/media/set/?set=a.5531413390219273&type=3
Day 2 - #Refresh T20 - https://www.facebook.com/media/set/?set=a.5531358786891400&type=3
Comments
Post a Comment