Skip to main content

Doosra Auditions

Play: Doosra
Language: Kannada
Director: PD Sathish Chandra
Written by: Anand Raghav
Kannada script: Chandan Shankar
Team: Prakasam
Audition Form: https://goo.gl/1RkC2L
Date: Sunday 8th April 2018
Time: 4 to 8 PM
Venue: Kala Kompound (Map- https://goo.gl/maps/qTX4Tysg8is)
For info mail prakasamtrust@gmail.com
Or Call Anand on 9243184533

Charecters we are auditioning for:

1. Main protagonist (Male)
2. Protagonist's Father
3. Protagonist's Mother
4. Indian Captain (Male)
5. Spinner/Friend of Protagonist (Male)
6. The Fan (Male)
7. The Bookie (Male/Female)
8. The BCCI Chairman (Male/Female)
9. The Businessman (Male/Female)
10. The Journalist (Male/Female)
11. The Model (Female)

For information on the play please see: www.prakasamtrust.org/doosra 

Script for Auditions:

ನಾಯಕನ ಸಾಲುಗಳು
ಗ: ನಾನು ಅರ್ಜುನ್ ಜೊತೆ ಆಡ್ತೀನಿ ಅಂತ ಅಂಕೊಂಡೆ ಇರಲಿಲ್ಲ ಡ್ಯಾಡ್, ನಾನು ಅಂಡರ್ ನೈಂಟೀನ್ ಟೀಮಲ್ಲಿ ಇದ್ದಾಗ ಅವರÀು ನನ್ನ ಬಗ್ಗೆ ಕೇಳಿದ್ರಂತೆ. ಈ ಚಾನ್ಸ್ ನನಗೆ ಸಿಕ್ಕಿದ್ದು ನನ್ನ ಲಕ್ಕಿಂದಾನೆ, ನಿಮಗೆ ನೆನಪಿದ್ಯ ಅಪ್ಪ, ಆ ಸೀರೀಸ್ ಲಾಸ್ಟ್ ಮ್ಯಾಚ್ ಬೆಂಗಳೂರಲ್ಲಿ ಇತ್ತು, ಅರ್ಜುನ್ ನೆಟ್ಸ್ ಅಲ್ಲಿ ಆಡ್ತಾ ಇದ್ರು, ನಾನು ಅವರ ಹತ್ರ ಬೋಲಿಂಗ್ ಮಾಡ್ಲಾ ಅಂತ ಕೇಳಿದೆ, ಅವರು ಮಾಡು ಅಂದ್ರು, ಮೊದ ಮೊದಲು ನಾನು ತುಂಬ ನರ್ವಸ್ ಆಗಿದ್ದೆ, ಅರ್ಜುನ್ ಗ್ರೌಂಡ್‍ನ ಎಲ್ಲ ಕಡೆಗೂ ಶಾಟ್ಸ್ ಹೊಡೀತಿದ್ರು, ಒಂದು ಬಾಲ್ ಅಲ್ಲಿ ಅವರು ಬೀಟ್ ಆದ್ರು, ನನ್ನ ದೂಸ್ರಾನ ಅವರು ರೀಡ್ ಮಾಡ್ಲಿಲ್ಲ, ಬೌಲ್ಡ್ ಆದ್ರು, ಅಲ್ಲಿ ಸ್ಟಾಂಡ್ಸ್‍ಲ್ಲಿ ಇದ್ದ ಜನ ಎಲ್ಲ ಚಪ್ಪಾಳೆ ಹೊಡಿಯೋಕೆ ಶುರು ಮಾಡಿದ್ರು, ಅರ್ಜುನ್ ಟೀಮ್‍ಮೇಟ್ಸ್ ಎಲ್ಲ ಶಾಕ್ ಆಗೊದ್ರು, ಅರ್ಜುನ್ ಕೂಡ ಒಬ್ಬ ಪುಟ್ಟ ಹುಡುಗನ ಬೋಲಿಂಗಲ್ಲಿ ಬೋಲ್ಡ್ ಆದ್ನಲ್ಲ ಅಂತ ಶಾಕ್ ಆಗಿದ್ರು. ಮತ್ತೆ ಬೋಲ್ ಮಾಡೋಕೆ ಹೇಳಿದ್ರು, ಅವರು ಹಾಗೆ ಹೇಳಿದ ತಕ್ಷಣ ನನ್ನಲ್ಲಿ ಉತ್ಸಾಹ, ಆತ್ಮವಿಶ್ವಾಸ ಜಾಸ್ತಿ ಆಯ್ತು, ನನ್ನ ಎಲ್ಲ ವೇರಿಯೇಷನ್ಸ ಟ್ರೈ ಮಾಡಿದೆ, ಅರ್ಜುನ್ ಕೆಲವು ಶಾಟ್ಸ್ ಆಡಿದ್ರು, ಒಂಡೆರಡು ಸಲ ಬೀಟ್ ಆದ್ರು, ನನ್ನ ಬೌಲಿಂಗಿಂದ ತುಂಬ ಇಂಪ್ರೆಸ್ಸಾಗಿದ್ರು. ನೆಟ್ ಸೆಶನ್ ಮುಗಿದಮೇಲೆ ನನ್ನ ಕರೆದು ಬೋಲಿಂಗ್ ಬಗ್ಗೆ ಸೊಲ್ಪ ಟಿಪ್ಸ್ ಕೊಟ್ರು, ಆಮೇಲೆ “ಇಂಡಿಯಾಗೆ ಆಡೋ ಅವಕಾಶ ಸಿಕ್ಕಿದ್ರೆ ಹೀಗೆ ಆಡ್ತೀಯ” ಅಂತ ಕೇಳಿದ್ರು, ನಾನು ಖುಷಿಯಿಂದ ಖಂಡಿತ ಆಡ್ತೀನಿ ಅರ್ಜುನ್ ಭಯ್ಯ ಅಂದೆ, ಅವರು ಸೆಲೆಕ್ಟರ್ಸ್ ಹತ್ರ ಮಾತಾಡಿ ನನ್ನ ಕಂಸಿಡರ್ ಮಾಡೋಕೆ ಹೇಳಿದ್ರು, ನನ್ನ ಅದ್ರುಷ್ಟಕ್ಕೆ ನಮ್ಮ ಟೀಮಿನ ಆಫ್ ಸ್ಪಿನ್ನರ್‍ಗೆ ಇಂಜುರಿ ಆಯ್ತು, ಹಾಗಾಗಿ ನನ್ನ ಈ ಒವರ್ಸೀಸ್ ಟೂರಿಗೆ ಸೆಲೆಕ್ಟ್ ಮಾಡಿದ್ದಾರೆ, ನನ್ನ ಐಡಲ್, ನನ್ನ ಫೇವರೇಟ್ ಪ್ಲೇಯರ್ ಜೊತೆ ನನ್ನ ಮೊದಲ ಸೀರೀಸ್ ಆಡ್ತಿದ್ದೀನಿ ಡ್ಯಾಡ್, ನಾನು ಎಷ್ಟು ಅದೃಷ್ಟವಂತ ಅಲ್ವ?

ತಂದೆಯ ಸಾಲುಗಳು:
ತಂ: ನನ್ನ ಎಲ್ಲ ಹಾರೈಕೆಗಳು, ಆಶೀರ್ವಾದ ಎಲ್ಲ ನಿನಗಿದೆ.
ನೀನು ಹೋಗೊ ಮುಂಚೆ ನಾನು ನಿನಗೆ ಕೆಲವು ವಿಚಾರಗಳನ್ನ ಹೇಳಬೇಕು, ನಿನ್ನ ಕ್ರಿಕೆಟ್ ಆಟದ ಜೀವನದುದ್ದಕ್ಕೂ ನೀನು ಇದನ್ನ ನೆನಪಿಟ್ಕೊಬೇಕು,  ನಿನಗೆ ಮುಂದೆ ಈ ಥರ ಅಡ್ವೈಸ್ ಮಾಡೊಕೆ ಆಗತ್ತೊ ಇಲ್ವೊ ಗೊತ್ತಿಲ್ಲ, ಅಥವಾ ನನ್ನಿಂದ ಅಡ್ವೈಸ್ ತೊಗೊಳೊ ಮನಸ್ಥಿತಿ ನಿನಗೆ ಇರತ್ತೊ ಇಲ್ವೋ ಅನ್ನೋದು ಗೊತ್ತಿಲ್ಲ.  ಗಣೇಶ್ ಈ ದೇಶದಲ್ಲಿ ಸಾವಿರ, ಲಕ್ಷ, ಕೋಟಿ ಜನ ಕ್ರಿಕೆಟ್‍ನ ತಮ್ಮ ಜೀವನವಾಗಿಸಿ ದೇಶಕ್ಕಾಗಿ ಆಡಬೇಕು ಅನ್ನೋ ಅಸೆಯಿಂದ ಇರ್ತಾರೆ, ಅದರಲ್ಲಿ ತುಂಬ ಜನ ಟ್ಯಾಲೆಂಟೆಡ್ ಆಗಿರೋರು ಇದ್ದಾರೆ, ಆದ್ರೆ ಕೆಲವರು ಮಾತ್ರ ಲಕ್ಕಿ ಆಗಿರ್ತಾರೆ ಆ ಸಾವಿರ, ಲಕ್ಷ, ಕೋಟಿ ಜನರಲ್ಲಿ ನೀನು ಲಕ್ಕಿ. ನಾನು ಕೂಡ ಕೇವಲ ರಣಜಿ ಕ್ರಿಕೆಟ್ ಮಾತ್ರ ಆಡೋದಕ್ಕೆ ಸಾಧ್ಯ ಆಯ್ತು, ಆದ್ರೆ ನೀನು ನಮ್ಮ ದೇಶಕ್ಕೆ ಆಡೋ ಹಾಗೆ ಮಾಡಿ ನಿನ್ನಲ್ಲಿ ನನ್ನ ಕನಸನ್ನ ನನಸಾಗಿಸ್ಕೊಳೋ ನನ್ನ ಆಸೆನಾ ನೀನು ಸಾಕಾರ ಮಾಡಿದ್ದೀಯ, ಈಗ ನಾನು ಪಟ್ಟ ಶ್ರಮ ಸಾರ್ಥಕ ಆಯ್ತು, ನಿನ್ನ ಯಶಸ್ಸಲ್ಲಿ ನನ್ನ ಸೊಲುಗಳೆಲ್ಲ ಮರ್ತೋಗಿದÉ. ಗಣೇಶ್ ವಿಶ್ವನಾಥನ್ ಅಂದಾಗ ನಾನು ಕೂಡ ಆ ಹೆಸರಲ್ಲಿ ಇರ್ತೀನಿ ಆನ್ನೋದೆ ನನಗೆ ಹೆಮ್ಮೆ. ಈಗ ನೀನು ಈ ದೇಶಕ್ಕೆ ಆಡ್ತಾ ಇರೋ ಕ್ರಿಕೆಟರ್, ಒಂದು ರೀತಿಯಲ್ಲಿ ಆ ಸಾವಿರ, ಲಕ್ಷ, ಕೋಟಿ ಜನರ ಪರವಾಗಿ ಆಡತಾ ಇರೊ ಕ್ರಿಕೆಟರ್, ಹಾಗಾಗಿ ನೀನು ಅವರೆಲ್ಲರ ರುವಾರಿ ಅನ್ನೋದನ್ನ ಮರೀಬೇಡ. ಗ್ರೌಂಡಲ್ಲಿ ಆಡೋ ಆಟದಲ್ಲಿ ಕುಶಲತೆ ಇದ್ರೆ ಮಾತ್ರ ಒಳ್ಳೇ ಆಟಗಾರ ಆಗೋದಿಲ್ಲ ಅನ್ನೋದನ್ನ ಮರೀಬೇಡ, ಒಬ್ಬ ವ್ಯಕ್ತಿಯಾಗಿ, ವ್ಯಕ್ತಿತ್ವವಾಗಿ ಜನ ನಿನ್ನ ಮೆಚ್ಚೋ ಹಾಗೆ ನಡ್ಕೊಬೇಕು, ಮುಂದಿನ ಪೀಳಿಗೆಯ ಆಟಗಾರರಿಗೆ ನಿನು ಮಾದರಿ ಆಗಬೇಕು, ಅರ್ಜುನ್ ಹೇಗೆ ನಿನಗೆ ಐಡಲ್ ಆಗಿದ್ದಾನೋ ನೀನು ಅವರ ಐಡಲ್ ಆಗೋ ದೊಡ್ಡ ಜವಾಬ್ದಾರಿ ನಿನ್ನ ಮೇಲಿದೆ. ನಾನು ನಿನ್ನ ಕೇವಲ ಒಂದೇ ಒಂದು ಮಾತು ಕೇಳ್ತೀನಿ ನಡೆಸ್ಕೊಡ್ತೀಯ?
ಗ: ಹೇಳಿ ಅಪ್ಪ
ತಂ: ಯಾವುದೇ ಕಾರಣಕ್ಕು ನೀನು ಕುಡಿತಕ್ಕೆ ಒಳಗಾಗಲ್ಲ ಅಂತ ನನಗೆ ಮಾತು ಕೊಡಬೇಕು, ನಾನು ತುಂಬ ಹಳೇ ಕಾಲದವನ ಥರ ಮಾತಾಡ್ತಿದ್ದೀನಿ ಅಂತ ನನಗೆ ಗೊತ್ತು, ಆದ್ರೆ ನನ್ನ ಪ್ರಕಾರ ಕುಡಿತಕ್ಕೆ ಒಳಗಾಗೋನು ಸುಲಭವಾಗಿ ಬೇರೆ ತಪ್ಪುಗಳನ್ನು ಮಾಡ್ತಾನೆ, ನಶೆಯಲ್ಲಿರುವಾಗ ಮತಿ ಮಿತವಾಗಿರತ್ತೆ. ಹಾಗಾಗಿ ಕುಡಿಯೊಲ್ಲ ಅಂತ ಮಾತು ಕೊಡು

ನಾಯಕನ ಸ್ಪಿನ್ನರ್ ಸ್ನೇಹಿತ 
ವಿ: ಆ ಟಾಕ್ಸಿ ಡ್ರೈವರ್ ಮಚ್ಚಾ, ಆಟೋಗ್ರಾಫ್ ಬೇಕು ಅಂದ. ಕೊಟ್ಟೆ. ನೀವೂ ಕ್ರಿಕೆಟ್ ನೋಡ್ತೀರ ಅಂದೆ ಅಷ್ಟೆ, ಅವನು ನನಗೆ ಅಡ್ವೈಸ್ ಮಾಡೋಕೆ ಶುರು ಮಾಡ್ಬಿಟ್ಟ, ಹೇಗೆ ಬೋಲ್ ಮಾಡಬೇಕು, ಎಲ್ಲೆಲ್ಲಿ ಫೀಲ್ಡರ್ಸ್ ನಿಲ್‍ಸ್ಕೊಬೇಕು, ಯಾವ ಬ್ಯಾಟ್ಸ್‍ಮನ್‍ನ ಹೇಗೆ ಟ್ಯಾಕಲ್ ಮಾಡಬೇಕು, ಬಾಲ್ ಹೇಗೆ ಶೈನ್ ಮಾಡಬೇಕು, ಯಾವ ಶೂ ಹಾಕೊಬೇಕು ಅಂತೆಲ್ಲ. ನಾನು ಸರಿ ಸರಿ ಅಂತ ತಲೆ ಆಡಿಸ್ತಾ ಇದ್ದೆ, ಇಷ್ಟಕ್ಕೆ ನಿಲ್ಲಲಿಲ್ಲ. ಏನು ತಿನ್ನಬೇಕು, ಏನು ತಿನ್ನಬಾರದು ಅಂತ ಶುರು ಮಾಡಿದ, ನಾನು ತಪ್ಪಿಸ್ಕೊಂಡು ಬಂದೆ. ಅಂಕಲ್ ಈ ಬೆಂಗಳೂರಿನವರು ನಮ್ಮ ಚೆನ್ನೈನವರ ಥರಾನೆ, ಎಲ್ಲರೂ ಬೇರೆಯವರಿಗಿಂತ ತಾವೆ ಕ್ರಿಕಟಲ್ಲಿ ಬುದ್ದಿವಂತ್ರು, ನಾನೇನಾದ್ರು ಟೀಮಲ್ಲಿ ಇದ್ದಿದ್ರೆ, ನಿನಗಿಂತ ಚೆನ್ನಾಗಿ ಆಡ್ತಿದ್ದೆ ಅನ್ನೋ ಥರ ಮಾತಾಡ್ತಾರೆ. ನಮ್ಮ ಜನ ಹೀಗೆ ಕ್ರಿಟಿಸೈಸ್ ಮಾಡಿ ಮಾಡಿ ಇಂಡಿಯನ್ ಟೀಮಲ್ಲಿ ಸೌತ್ ಇಂಡಿಯಾದವರು ಯಾರು ಇಲ್ಲದೇ ಇರೋ ಹಾಗೆ ಮಾಡಿಟ್ಟಿದ್ದಾರೆ. ಆಂಟಿ ನೀವು, ನೀವು ಕ್ರಿಕೆಟ್ ಫಾನ್ ಆ?
ವಿ: ಬರಿ ಬೋಲಿಂಗ್ ಮಾಡೋರು ವಿಕೆಟ್ ತೊಗೊತಾರೆ ಅಂತ ಯಾರು ಅಂಕಲ್ ಹೇಳಿದ್ದು, ಈ ಮದನ್ ಲಾಲ, ಮೊಹಿಂದರ್ ಅಮರ್ನಾಥ್ ಎಲ್ಲ ಬೋಲಿಂಗ್ ಮಾಡೋವಾಗ ಶ್ರೀಕಾಂತ್ ಏನ್ ಮಾಡ್ತಿದ್ರು ಅಂತ ಗೊತ್ತ ನಿಮಗೆ? ಗೊತ್ತ? ಅವರಿಗೆ ಒಂದು ಪ್ರಾಬ್ಲಮ್ ಇದೆ, ನಮ್ಮ ಸ್ಟೇಟ್‍ನವರ ಥರ, ಮಾತಾಡೋದು ನಿಲ್ಲಿಸೋಕೆ ಆಗಲ್ಲ ಅವರಿಗೆ, ಸೊ ಸಿಲ್ಲಿ ಪಾಯಿಂಟ್ ಅಲ್ಲಿ, ಶಾರ್ಟ ಲೆಗ್ ಅಲ್ಲಿ ನಿಂತು ಶ್ರೀಕಾಂತ್ ವಟ ವಟ ವಟ ಅಂತ ಮಾತಾಡ್ತಾನೆ ಇದ್ರು, ಈ ಗಲಾಟೆಲಿ ವೆಸ್ಟ್ ಇಂಡೀಸ್ ಬ್ಯಾಟ್ಸ್ಮೆನ್ ಪಾಪ ಕಾಂಸಂಟ್ರೇಟ್ ಮಾಡೋಕ್ಕಾಗದೆ ಒಬ್ಬೊಬ್ಬರಾಗಿ ಔಟಾಗೋದ್ರು, ಹಾಗಂದಮೇಲೆ ವಿಕೆಟ್ ತೊಗೊಂಡಿದ್ದು ಯಾರು? ಶ್ರೀಕಾಂತ್ ತಾನೆ?

ಬಿಸಿಸಿಐ ಛೇರ್ಮನ್
ಚೆ: ಸರ್, ಹೊರದೇಶದ ಟೂರಿಗೆ ಹೋದಾಗ ಅಲ್ಲಿನ ಹವಾಮಾನ, ಪಿಚ್ ಕಂಡಿಷನ್ಸ್ ಎಲ್ಲ ಬೇರೆ ಥರ ಇರತ್ತೆ. ಇಂಗ್ಲೆಂಡಲ್ಲಿ ತುಂಬ ಛಳಿ ಇರತ್ತೆ, ಮತ್ತೆ ಬಾಲ್ ಸ್ವಿಂಗಾಗತ್ತೆ, ಆಸ್ಟ್ರೇಲಿಯಾಲಿ ಬೌಂಸಾಗತ್ತೆ. ಈ ಥರ ದೇಶದಲ್ಲಿ ಆಡೋವಾಗ ಫಾಸ್ಟ್ ಬೋಲರ್ಸ್ ಇರಲೇಬೇಕು ಆದ್ರೆ ನಮ್ಮ ಟೀಮಲ್ಲಿ ಆ ಥರ ಯಾರು ಇಲ್ಲ. ಒಬ್ಬ ಪೇಸ್ ಬೋಲರ್ ಇದ್ದ, ಹೇಮಂತ್ ಕುಮಾರ ಅಂತ, ಅವನ್ನ ಸೆಲೆಕ್ಷನ್ ಕಮಿಟಿಯವರು ಡ್ರಾಪ್ ಮಾಡಿದ್ರು, ಹಾಗೆ ಟೂರಲ್ಲಿ ಇದ್ದ ಇಬ್ಬರು ಪೇಸ್ ಬೋಲರ್ಸ್‍ಗೆ ಇಂಜುರಿ ಆಯ್ತು, ಅವರು ಆಡೋಕೆ ಆಗಲಿಲ್ಲ, ಇಷ್ಟೆಲ್ಲ ತೊಂದರೆಗಳ ನಡುವೆ ಗೆಲ್ಲೊದು ಹೇಗೆ ಸರ್. ಶ್ರಿಲಂಕಾ ಪೂರ್ತಿ ತಪ್ಪು ಟೈಮಿಂಗ್ ಸರ್, ಸಿವಿಲ್ ವಾರು, ಸೆಕ್ಯುರಿಟಿ ಪ್ರಾಬ್ಲಮ್ ಅಲ್ಲಿ ನಮ್ ಟೀಮ್ನವರು ಸೆಟಲ್ ಆಗೋದಿಕ್ಕೆ ಆಗಲಿಲ್ಲ ಸರ್.

ಚೇ: ನಿಮಗೆ ಅರ್ಥ ಆಗೋ ಥರ ಹೇಳಬೇಕು.. ಸರಿ ಸರ್, ಪ್ರಯತ್ನ ಮಾಡ್ತೀನಿ. ಸರ್, ಇಂಗ್ಲೆಂಡಲ್ಲಿ ಸಿಕ್ಕಾಪಟ್ಟೆ ಛಳಿ, ಅದಕ್ಕೆ ದೋಸೆ ಹಿಟ್ಟು ಸರಿಯಾಗಿ ಒದಗಲ್ಲ, ಶ್ರೀಲಂಕಾದಲ್ಲಿ ತುಂಬ ಬಿಸಿಲು ಹಾಗಾಗಿ ದೋಸೆ ಸೀದೋಯ್ತು. ಆಮೇಲೆ ದೋಸೆ ಮಾಡೋವಾಗ ಇಬ್ಬರು ಭಟ್ಟರ ಕೈ ಗಾಯ ಆಗೋಗಿದ್ದರಿಂದ ಅವರಿಗೆ ದೋಸೆ ಮಾಡೋದಕ್ಕೆ ಆಗಲಿಲ್ಲ, ನಮ್ಮಲ್ಲಿ ಒಬ್ಬ ಒಳ್ಳೇ ನುರಿತ ದೋಸೆ ಭಟ್ಟ ಹೆಮಂತ್ ಕುಮಾರ್ ಅವರನ್ನ ಹೋಟೆಲಿಗೆ ಬರಬೇಡ ಅಂತ ನಾವೆ ಹೇಳಿ ಕಳ್ಸಿದ್ವಿ, ಅವನು ಮನೇಲಿ ಕೂತು ದೋಸೆ ಮಾಡ್ತಿದ್ದಾನೆ ಸರ್.

ಅಭಿಮಾನಿಯ ಸಾಲುಗಳು 
ಫ: ಸರ್. ನನಗೆ ನಿಮ್ಮ ಬಗ್ಗೆ ನಿಮಗೇ ಮರ್ತೋಗಿರೊ ವಿಷಯ ಎಲ್ಲ ಗೊತ್ತು ಸರ್. ನಿಮ್ಮ ಮೊದಲನೇ ಅಂಡರ್ 16 ಮ್ಯಾಚಲ್ಲಿ 49 ರನ್ಸ್ ಹೊಡೆದು ರನ್ ಔಟ್ ಆಗಿದ್ರಿ ಕರೆಕ್ಟ್ ಅಲ್ವ ಸರ್? ರಣಜಿ ಟ್ರೋಫೀ ಮೊದಲ ಮ್ಯಾಚಲ್ಲಿ ನೀವು 6 ವಿಕೆಟ್ ತೊಗೊಂಡ್ರಿ ಅದರಲಿ 3 ಕ್ಲೀನ್ ಬೋಲ್ಡ್ ಸರ್. ನಿಮ್ಮ ಬೋಲಿಂಗ್ ಕ್ಯರಿಯರ್ ಅಲ್ಲಿ 68 ಸಲ ಕ್ಲೀನ್ ಬೋಲ್ಡ್ ಮಾಡಿದ್ದೀರ ಸರ್ ಕರೆಕ್ಟಾ?
ನಿಮ್ಮ ಫೇವರೇಟ್ ಕಲರ್ ನೀಲಿ, ಬಿಸಿಬೇಳೆಭಾತ್ ಮತ್ತೆ ಮದ್ದೂರು ವಡೆ ಅಂದ್ರೆ ನಿಮಗೆ ತುಂಬ ಇಷ್ಟ, ಅಮ್ಮನ ಅಡಿಗೆ ತುಂಬ ಇಷ್ಟ ನಿಮಗೆ, ಇದನ್ನ ನೀವು ಒಂದು ಇಂಟವ್ರ್ಯೂ ಅಲ್ಲಿ ಹೇಳಿದ್ರಿ ಸರ್, ನಿಮ್ಮ ಬಲಗೈ ಮೇಲೆ ಒಂದು ಮಾರ್ಕಿದೆ ಸರ್, ಇದು ನಿಮಗೆ 10 ವರ್ಷ ಆಗಿದ್ದಾಗ ಆದ ಆಕ್ಸಿಡೆಂಟಿಂದ ಆಗಿದ್ದು, ಅಮೇಲೆ ನಿಮಗೆ ಒಂದು ನಂಬಿಕೆ ಇದೆ ಸರ್, ನಿಮ್ಮ ಎಡಗೈಲಿ ಬ್ಯಾಟ್ ಹಿಡಕೊಂಡು ಹೋದ್ರೆ ನೀವು ಬೇಗ ಔಟಾಗ್ತೀರ ಅದಕ್ಕೆ ನೀವು ರೈಟ್ ಹ್ಯಾಂಡಲ್ಲಿ ಬ್ಯಾಟ್ ಹಿಡ್ಕೊಂಡು ಹೋಗ್ತೀರ ಅಲ್ವ ಸರ್?

ತಾಯಿಯ ಸಾಲುಗಳು 
ತಾಯಿ : ಹೌದು ಅವನು ನಿಮ್ಮ ವiಗಾನೆ, ಅವನು ನನ್ನ ಮಗ ಆಗಿದ್ರೆ ನಾನು ಅವನಿಗೆ ಕ್ರಿಕೆಟರ್ ಆಗೋಕೆ ಬಿಡ್ತಾ ಇರಲಿಲ್ಲ, ಸಾಫ್ಟವೆರ್ ಎಂಜಿನಿಯರ್ ಮಾಡ್ತಿದ್ದೆ, ಯು.ಎಸ್ ಅಲ್ಲೋ ಯು.ಕೆ ಯಲ್ಲೊ ಸೆಟಲ್ಲಾಗಿ ಕೈತುಂಬ ಸಂಬಳ ತರೋ ಹಾಗೆ ಮಡ್ತಿದ್ದೆ, ಈ ಸೋಂಬೇರಿ ಆಟ ಆಡಿಸಿ ನೀವು ಅವನ ಕರಿಯರ್ ಹಾಳು ಮಾಡ್ಬಿಟ್ರಿ
ತಂದೆ : ನಿನಗೇನು ಗೊತ್ತು, ಇಂಡಿಯಾದಲ್ಲಿ ಕ್ರಿಕೆಟರ್ ಆಗಬೇಕು ಅಂತ ಎಷ್ಟು ಜನ ಯಾವ ಥರ ಸರ್ಕಸ್ ಮಾಡ್ತಾರೆ ಅಂತ ? ನಿನ್ನ ಈ ಬೆಂಗಳೂರಿನ ಮಿಡಲ್ ಕ್ಲಾಸ್ ಯೋಚನೆಗೆ, ಪ್ಯಾದೆ ಥರ ಇರೊ ಸಾಫ್ಟವೇರ್ ಎಂಜಿನಿಯರ ಕೆಲಸ ಬಿಟ್ಟು ಬೇರೆ ಏನು ತೋಚಲ್ಲ
ತಾಯಿ : ಅಹಹಹಾ.. ಸಾಫ್ಟವೇರ್ ಇಂಜಿನಿಯರ್ ಆಗಿದ್ರೆ ಟೈ ಕಟ್ಕೊಂಡು ಏ.ಸಿ ಆಫೀಸಲ್ಲಿ ಕೂತು ಲ್ಯಾಪ್ಟಾಪ್ ಇಟ್ಕೊಂಡು ಜುಮ್ ಅಂತ ಇರ್ತಿದ್ದ, ಅದೇ ಈಗ? 5 ದಿನ ಆ ರಣಬಿಸಿಲಲ್ಲಿ ನಿಂತು, ಕ್ರಿಕೆಟ್ ಬಾಲ್ ಹಿಂದೆ ಬಿಡುವಿಲ್ಲದೆ ಓಡೋದೇನು, ಬೀಳೋದೇನು, ಮೈ ಕೈ ಗಾಯ ಮಾಡ್ಕೊಳೋದೇನು ? (ಆಡಿಯೆಂಸ್‍ಗೆ) ನೀವೇ ಹೇಳಿ ಯಾವ ಜೀವನ ವಾಸಿ ಅಂತ?

ತಾಯಿ: ಓಹ್ ಪ್ಲೀಸ್ ಸೊಲ್ಪ ಸುಮ್ನಿರಿ, ನಾನು ಈ ಆಟದ ಬಗ್ಗೆ ಮಾತಾಡಿ ದೊಡ್ಡ ತಪ್ಪು ಮಾಡ್ಬಿಟ್ಟೆ. ಪ್ರಪಂಚದ ಅತೀ ಶ್ರೇಷ್ಟವಾದ ಆಟ ಅಂದ್ರೆ ಕ್ರಿಕೆಟ್ಟೇ ಸರೀನಾ? ನಿಮ್ಮಿಂದ ನಾನು ಇನ್ನೇನು ತಾನೆ ನಿರೀಕ್ಷಿಸೋಕೆ ಸಾಧ್ಯ? ನೀವು ನಮ್ಮಮ್ಮನ ಮನೇಲಿ ಆ ರಾತ್ರಿ ನಡೆಕೊಂಡಿದ್ದು ನೆನಸ್ಕೊಂಡ್ರೆ ಈಗಲು ಮೈಯಲ್ಲ ಉರಿಯತ್ತೆ. ಅಲ್ಲ ಅರ್ಧರಾತ್ರಿಯಲ್ಲಿ ಮನೆಯಿಂದ ಹೊರಗಡೆ, ಛಳಿಯಲ್ಲಿ ನಿಂತು ಕಾಮೆಂಟರಿ ಕೇಳೋ ಅಂಥಾದ್ದು ಏನಿತ್ತು? ಪಾಪ ಅವರೆಲ್ಲ ನೀವು ನನ್ನ ಮೇಲೆ ಕೊಪ ಮಾಡ್ಕೊಂಡಿದ್ದೀರ, ನಮ್ಮ ನಡುವೆ ಏನು ಆಗಿಲ್ಲ, ಅಂದುಕೊಂಡು ಎಷ್ಟು ಆತಂಕ ಪಟ್ಟಿದ್ರು
ತಂದೆ: ಅವತ್ತು ಇಂಪಾರ್ಟೆಂಟ್ ಮ್ಯಾಚ್ ನಡೀತಿತ್ತು, ಇಂಡಿಯಾ ವೆಸ್ಟ್‍ಇಂಡೀಸ್‍ದು, ಆದ್ರೆ ಅವತ್ತು ಹಾಗಾದಮೇಲೆ ನಾನು ರಾತ್ರಿ ಬೆಡ್ರೂಮಿಂದ ಆಚೆ ಹೋಗೋದು ಬಿಟ್ಟೆ ತಾನೆ?
ತಾಯಿ: ನೀವು ಬೆಡ್ರೂಮಿಂದ ಆಚೆ ಹೋಗಲಿಲ್ಲ, ಆ ದರಿದ್ರ ರೇಡಿಯೋನ ಬೆಡ್ಡಿಗೆ ತಂದ್ರಿ, ಆಲ್ಲ ಪಕ್ಕದಲ್ಲಿ ಹೆಂಡತಿ ಮಲಗಿರೋವಾಗ, ಕಿಶೋರ್ ಕುಮಾರ್ ರೊಮಾಂಟಿಕ್ ಹಾಡು ಕೇಳೊದು ಬಿಟ್ಟು ಆ ಬೊಚ್ಬಾಯಿ ಇಂಗ್ಲೀಷ್‍ನವರ ಕಾಮೆಂಟರಿ ಕೇಳ್ತಿದ್ರಲ್ಲ, ಏನು ಹೇಳೋದು ನಿಮ್ಮ ಬುದ್ದಿಗೆ

ಪತ್ರಕರ್ತರ ಸಾಲುಗಳು 
ರಿ: ಇಂಡಿಯ ಟೀಮ್ ಸೌತಾಫ್ರಿಕಾ ಮೇಲೆ ಬೇಕು ಅಂತ ಸೋತ್ರು, ಇದೆಲ್ಲ ಮಾಚ್ ಫಿಕ್ಸಿಂಗ್ ಕರಾಮತ್ತು ಅಂತ ವದಂತಿ. ಬೋರ್ಡ್ ಇದರ ಬಗ್ಗೆ ಎಂಕ್ವೈರಿ ಬೇರೆ ಆರ್ಡರ್ ಮಾಡಿದ್ಯಂತೆ?
ರಿ: ಸರ್ ಮಾತು ಬದಲಾಯಿಸಬೇಡಿ, ನಾನು ಮ್ಯಾಚ್ ಫಿಕ್ಸಿಂಗ್À ಆಗಿದೆ ಅನ್ನೋದನ್ನ ಪ್ರೂವ್ ಮಾಡ್ತೀನಿ, ಅದಕ್ಕೆ ಲಾಜಿಕಲ್ ರೀಸನ್ಸ್ ಕೂಡ ಕೊಡ್ತೀನಿ
ಮಿನಿ: ಅದ್ಯಾವ್ ಸ್ಟೋರಿ ಕಥೆನೋ ಹೇಳಮ್ಮ ಕೇಳಣ
ರಿ: ಸರ್ ನಿಮಗೆ ಮೊದಲ ಮಾಚ್ ನೆನಪಿದ್ಯ? ಇಂಡಿಯ 50 ಓವರ ಅಲ್ಲಿ 456 ರನ್ ಮಾಡಿ ಮ್ಯಾಚ್ ಗೆದ್ದಿದ್ದಾರೆ. ಆದ್ರೆ ಎರಡನೇ ಮ್ಯಾಚ್ ಅಲ್ಲಿ 122 ರನ್ನಿಗೆ ಆಲ್ ಔಟ್ ಆಗೋದ್ರು. ಅದ್ಹೇಗೆ ಸಾರ್ ಸಾಧ್ಯ? ಇದರ ಬೇಸಿಸ್ ಮೇಲೆ ಎರಡನೇ ಮ್ಯಾಚ್ ಫಿಕ್ಸಾಗಿದೆ ಅಂತ ಹೇಳಬಹುದು ಸರ್.

ತಂಡದ ನಾಯಕನ ಸಾಲುಗಳು 
ಅಜು: ನೀನು, ನೀನು ಗಣೇಶ್, ನೀನೆ ನಮ್ಮ ಪ್ರಾಡಕ್ಟ್, ನಾವು ನಿನ್ನ ಟಿ.ವಿ. ಲಿ ಮೋವಿಗಳಲ್ಲಿ, ಜಾಹೀರಾತುಗಳಲ್ಲಿ, ಕ್ರಿಕೆಟ್ ಗ್ರೌಂಡಲ್ಲಿ, ಜಿಮ್‍ಗಳಲ್ಲಿ ಎಲ್ಲ ಕಡೆ ನಿನ್ನ ಮಾರಾಟ ಮಾಡ್ತೀವಿ. ಇಂಡಿಯಾದ ಅತೀ ಯಶಸ್ವಿ ಕ್ರಿಕಟ್ ಪಟು ಗಣೇಶ್, ಕೇವಲ ಒಬ್ಬ ಆಟಗಾರ ಅಲ್ಲ, ನೀನು ಒಂದು ಬ್ರಾಂಡ್, ಕ್ರಿಕೆಟ್ ಬೋರ್ಡ್ ನಿನಗೆ ಕೇವಲ ನೀನು ಆಡೋ ಆಟಕ್ಕೆ ಮಾತ್ರ ದುಡ್ಡು ಕೊಡತ್ತೆ, ಆದ್ರೆ ನಾವು ಕಾರ್ಪೊರೇಟ್ ವಿಧಾನದಿಂದ ನಿನ್ನ ಎಲ್ಲ ಕೆಲಸಗಳು, ನೀನು ಹಾಕೊ ಶರ್ಟ್, ಶೂಸ್, ನೀನು ತಿನ್ನೊ ಅಕ್ಕಿ, ಕುಡಿಯೋ ನೀರು ಎಲ್ಲವುದರಲ್ಲು ನಿನಗೆ ದುಡ್ಡು ಬರೊ ಅವಕಾಶ ಇದೆ, ಆ ಅವಕಾಶವನ್ನ ನಮ್ಮ ಕಂಪನಿ ನಿನ್ನ ಪಾಲಿಗೆ ನಿಜ ಮಾಡತ್ತೆ,
: ಹೇಗೆ?
ಅಜು: ನೀನು ಒಂದು ಕಾಂಟ್ರಾಕ್ಟ್ ಸೈನ್ ಮಾಡಿ ನಮ್ಮ ಕಂಪನಿ ಸೇರಿದ್ರೆ ಆಯ್ತು, ನಿನ್ನ ಎಲ್ಲ ರೀತಿಯಲ್ಲಿ ನಾವು ಬಳಸಿಕೊಂಡು ಅದರಿಂದ ಬರೋ ದುಡ್ಡನ್ನ ನಿನಗೆ ಕೊಡ್ತೀವಿ
ವಿ: ನಿನ್ನ ಹೋಲಸೇಲಲ್ಲಿ ಕೊಂಡುಕೊಂಡು ರೀಟೇಲಲ್ಲಿ ಮಾರ್ತಾನೆ
ಅಜು: ಇದು ಕಾಂಟ್ರಾಕ್ಟ್‍ನ ಡ್ರಾಫ್ಟ್, ಇದರ ವ್ಯಾಲ್ಯೂ 50 ಕೋಟಿ. ಇದು 3 ವರ್ಷಕ್ಕೆ ವಾಲಿಡ್ ಆಗಿರತ್ತೆ, ಇದು ಕೇವಲ ಒಂದು ಕಂಪನಿಯ ಆಫರ್, ಇದೇ ಥರ ಇನ್ನು 3-4 ಕಂಪನಿಗಳು ಆಗಲೆ ನಿನ್ನ ಸೈನ್ ಮಾಡ್ಕೊಳಕ್ಕೆ ಕಾಯ್ತಾ ಇದೆ.
: 50  ಕೋಟಿ, ಇಷ್ಟೊಂದು ದುಡ್ಡು ಎಲ್ಲಿಂದ ಬರತ್ತೆ?
ಅಜು: ಎಲ್ಲಿಂದ ಅಂದ್ರೆ? ನಮ್ಮ ಕ್ರಿಕೆಟ್ ಇಷ್ಟ ಪಡೋ ಪಬ್ಲಿಕ್ ಇಂದ ಬರತ್ತೆ ಬೇಬಿ. ಇದು ತುಂಬ ಕಮ್ಮಿ, ನಮ್ಮ ಕ್ರಿಕೆಟ್ ಬೋರ್ಡಿಗೆ ವರ್ಷಕ್ಕೆ ಅದೆಷ್ಟೋ ಸಾವಿರ ಕೋಟಿ ಬರತ್ತೆ ಇದೇ ಥರದ ಮಾರ್ಕೆಟಿಂಗ್ ಇಂದ. ನಾನು ಹೇಳಿದ ಹಾಗೆ ನಿನ್ನ ನಿಜವಾದ ವ್ಯಾಲ್ಯೂ ನಿನಗೆ ಗೊತ್ತಿಲ್ಲ, ಅದನ್ನ ನಾವು ಗೊತ್ತು ಮಾಡಿಸ್ತಿವಿ.

ಲಿಕ್ಕರ್ ಬ್ಯಾರೊನ್:
ಲಿಕ್ಕರ್: 50 ಓವರ್ ತುಂಬ ಜಾಸ್ತಿ ಸರ್, 20 ಓವರ್ ಸಾಕು ಅನ್ಸತ್ತೆ ಸರ್, 4 ರೌಂಡ್ ಬೀರ್ ಮುಗಿಯೋಷ್ಟರಲ್ಲಿ ಆಟ ಮುಗಿದೋಗಬೇಕು.
ಲಿ: ಈ ಆಟಕ್ಕೆ ಸೊಲ್ಪ ಶೃಂಗಾರ ತರಬೇಕು ಸರ್, ರಾತ್ರಿ ಆಡೋ ಆಟಕ್ಕೆ ರಂಗೇರಿಸಬೇಕು. ಫೋರು ಸಿಕ್ಸು ವಿಕೆಟ್ ಇದೆಲ್ಲ ಆದಾಗ ಮ್ಯೂಸಿಕ್ ಜೊತೆಗೆ ಡ್ಯಾಂಸಿಂಗ್ ಗರ್ಲ್‍ಸ್, ಲೈವ್ ಬ್ಯಾಂಡ್ ಥರ, ತುಂಡು ಬಟ್ಟೆಲಿ ಅವರು ಡ್ಯಾಂಸ್ ಮಾಡ್ತಿದ್ರೆ ಗ್ಲಾಮರ್ ಹೆಚ್ಚಾಗತ್ತೆ. ಹಾಗೇ ಊಹೆ ಮಾಡ್ಕೊಳಿ ಸರ್, ರಾತ್ರಿ ಆಟ, ಜೊತೆಗೆ ಪಟಾಕಿ, ಮ್ಯೂಸಿಕ್, ಡ್ಯಾಂಸಿಂಗ್ ಗರ್ಲ್‍ಸ್.

ಬುಕಿ:
ಬುಕಿ: ಗಣೇಶ್ ನೀನು ಆಡಬೇಕಿರೋದು, ದುಡ್ಡಿಗೆ, ಹೆಸರು ಮಾಡೋದಕ್ಕೆ, ಈ ದೇಶಕ್ಕೋಸ್ಕರ ಆಡೋದು, ಜನಕ್ಕೋಸ್ಕರ ಆಡೋದು ಎಲ್ಲ ಮೀಡಿಯಾ ಕ್ರಿಯೇಟ್ ಮಾಡಿರೊ ಒಂದು ಸೆಂಟಿಮೆಂಟಲ್ ನಾಟಕ ಆಷ್ಟೆ. ಆಟದ ಆಯಾಮಗಳು ಬದಲಾಗಿವೆ, ಈಗ ಇದು ದುಡ್ಡು ಮಾಡೊ ಒಂದು ಸಾಧನ, ಅದಕ್ಕೆ ಎಲ್ಲರೂ ನಿಮಗೆ ಸ್ಟಾರ್ ಸ್ಟೇಟಸ್ ಕೊಡ್ತಾರೆ, ಬಾಲಿವುಡ್ ಅಲ್ಲಿ ಸಿನಿಮಾ ಮಾಡೋರು ಹೇಗೆ ದುಡ್ಡು ಮಾಡಿ ಕೊಡ್ತಾರೊ ಹಾಗೆ ನೀವು. ಮುಂಚೆ ದುಡ್ಡು ಕೇವಲ ಆಟ ಆಡೋದರ ಸಂಬಳದಿಂದ ಬರ್ತಾ ಇತ್ತು, ಈಗ ಅದಕ್ಕೆ ಬೇರೆ ಬೇರೆ ಥರದ ದಾರಿಗಳಿಗೆ. ಅದೇ ಥರದ ಒಂದು ದಾರಿಯನ್ನ ನಿನಗೆ ತೋರಿಸಿಕೊಡೋದಕ್ಕೆ ನಾನು ಇವತ್ತು ಬಂದಿರೋದು, ನೀನು ಒಪ್ಪೋದಾದ್ರೆ.
: ನನಗೆ ಏನು ಅರ್ಥ ಆಗ್ತಿಲ್ಲ ರಾಕೇಶ್.
ಬುಕಿ: ನೀನು ಈ ಟೀಮಿನ ಕಾಪ್ಟನ್, ಟೀಮ್ ಗೆಲ್ಲೋದಕ್ಕೆ ಸೋಲೋದಕ್ಕೆ ನೀನು ಮಾಡೊ ಡಿಸಿಷನ್ಸ್ ತುಂಬ ಮುಖ್ಯ ಆಗತ್ತೆ, ಆ ಡಿಸಿಷನ್ ಮೇಕಿಂಗ್ ಪವರ್ ನಿನ್ನ ಹತ್ರ ಇರೋವಾಗಲೇ ನೀನು ಇನ್ನೊಂದು ರೀತಿಯ ಆಟ ಆಡಿದ್ರೆ ನಿನಗೆ ಬೇಕಾದ್ದೆಲ್ಲ ನಿನ್ನದಾಗತ್ತೆ. ಕೋಟ್ಯಂತರ ಅಭಿಮಾನಿಗಳಿಗಾಗಿ ಆಡೋ ಆಟದ ಬಗ್ಗೆ ನಿನಗೆ ಗೊತ್ತು, ಆದ್ರೆ ಕೋಟಿ ಕೊಟಿ ಇನ್ವೆಸ್ಟ್ ಮಾಡೋರಿಗೆ ಆಡೊ ಅಟದ ಬಗ್ಗೆ ಈಗ ನಾನು ನಿನಗೆ ಹೇಳ್ತಿನಿ. ನಿಮ್ಮ ಕ್ವಾರ್ಟ್‍ರ್ ಫೈನಲ್ ಮ್ಯಾಚ್ ಇರೋದು ಪಾಕಿಸ್ತಾನದ ಮೇಲೆ. ನಿವು ಅವರ ಮೇಲೆ ಗೆದ್ರೆ ವರ್ಲ್‍ಡ್ ಕಪ್ ಗೆದ್ದಷ್ಟೆ ಸಾಧನೆ. ಆದ್ರೆ ಪಾಕಿಸ್ತಾನ್ ತುಂಬ ಒಳ್ಳೇ ಫಾರಂ ಅಲ್ಲಿದೆ. ಹಾಗಾಗಿ ಬೆಟ್ಟಿಂಗ್ ಪಾಕಿಸ್ತಾನದ ಪರವಾಗಿ ಇದೆ. 5:1. ಹಾಗಾಗಿ ನಾನು ಈಗ ಒಂದು ಕೊಟಿ ನಿಮ್ಮ ಮೇಲೆ ಇನವೆಸ್ಟ್ ಮಾಡಿ, ಅಂದ್ರೆ ಬೆಟ್ ಮಾಡಿ, ನೀವು ಗೆದ್ದರೆ, ನಾವು ಒಂದೇ ದಿನದಲ್ಲಿ ಸಾವಿರಾರು ಕೋಟಿ ಮಾಡ್‍ಕೊತಿವಿ. ಈಗ ನಿನಗೆ ನನ್ನ ಆಫರ್ ಬಗ್ಗೆ ಹೇಳ್ತೀನಿ, ನೀನು ನನ್ನ ಜೊತೆ ಕೈ ಮಿಲಾಯಿಸಿದ್ರೆ, ನಾನು ಬೆಟ್ ಮಾಡೊ ದುಡ್ಡುನ 50% ನಿನಗೆ ಕೊಡ್ತೀನಿ. ನೀನು ಇಡೀ ವರ್ಷ ಕ್ರಿಕೆಟ್ ಆಡಿ ಸಂಪಾದನೆ ಮಾಡೋಷ್ಟು ದುಡ್ಡು ಇದೊಂದೆ ಮ್ಯಾಚ್ ಅಲ್ಲಿ ದುಡೀಬಹುದು. ನೀನು ಯೆಸ್ ಅಂದ್ರೆ, ಪಾಕಿಸ್ತಾನ್ ನಿಮ್ಮ ಮೇಲೆ ಕ್ವಾರ್ಟರ್ ಫೈನಲ್ ಅಲ್ಲಿ ಸೊಲೋ ಹಾಗೆ ನಾನು ಮಾಡ್ತೀನಿ.

Comments

Post a Comment

Popular posts from this blog

Prakasam Productions

  ಕಲಾ ಕೃಷಿ - Agriculture of Culture ಕಲಾ ಕೃಷಿ Kalaa Krushi, all the Performing Arts activities we do for Pradarshana Kalaa Samsthe (Prakasam).  This page is the index of all our endeavors.  We would appreciate your Feedback on our activities and request you to support our endeavors. Check out our dedicated & selfless team, our Team Activities & Join Hands with us for Kala Krushi.  If you are interested in joining us here is the WHATSAPP COMMUNITY LINK or mail us at prakasamtrust@gmail.com   Productions List: Home Theatre Toyota Road Awareness Program Jalpa Sanamathe Kathakhanda Sathya Nithya Isila Road awareness skit for Toyota   Varalakshmi Avaantara Caronammana Krupe Meenina Hejje Nivaarya Sahana Murthy Mahapeede Mahablu Masthi Kallu Namma Nimmolagobba Mr. Shambho Shiva Shankara Bhava Navanaveena Avalavanu Avanavalu Gulle Nari Ugalageete Bogie Katha Sangama Sairandhri Vaave Kattalu* Yaksha* Rayakota 1858* 13 Margosa Mahal Hosabelaku Doos...

Katha Sangama "Bouquet of Stories"

Katha Sangama "Bouquet of Stories"  There has been a trend of short plays in the modern time of timelessness. We are so used to instant food, job, friendship, money we are also bombarded with requests for short plays. We now have successfully prepared the “Bouquet of Stories” exclusively for you. Marking the 100th birth anniversary of Kodagina Gowramma , the gallant feminist writer at her times (1912-1939) we are staging her short story too as part of this festival.  The play is in Kannada and the exquisite selection of the stories will make you want more. With eight Jnanapeth Awards and stalwarts to choose from we had to read more than 120 short stories written between early 1930’s to 2011 to arrive at this unique bouquet. We sincerely hope that you will have a blast watching this as we have creating this performance piece for you. We enclose a small brief below of the stories to give you a better idea of the performances. We have interwoven six stories, running around the ...

Team Prakasam

Team Prakasam during one of it's Pot-luck Party on 17-03-2013 ( JOIN US HERE ) We at Prakasam  believe in team work and building a strong team.  All the work Prakasam has done in the past decade ( Kala Krushi Page ) has been possible because of the selfless and unconditional support of its team members.  Where there is a team there would be work related to performing arts and also many more merry gatherings, parties, team holidays etc.  LOOK AT US WHEN WE PLAY & WHEN WE WORK . We are listing the official ones below to enthuse and entertain committed performing arts lovers to join us as volunteers.  Join us by applying to our Production Internship Programme  or by answering 10 simple questions, CLICK HERE . All our Crazy Empathy Videos (even before there was tiktok or reels) Annual Trip 2023 Secret Santa+6 Birthdays+Mini Potluck on 25 Dec 2013 Niswarga trip post KHKS4 fest, 19 April 2013 IPL6 Empathy a Jumping J...