Skip to main content

ನಾ ಕಂಡ ನಿವಾರ್ಯ - ಶ್ರೀಮತಿ ಶ್ರೀರಂಗಮಣಿಯವರ ವರದಿ

ನಾ  ಕಂಡ  ನಿವಾರ್ಯ - ಶ್ರೀಮತಿ ಶ್ರೀರಂಗಮಣಿಯವರ ವರದಿ 


ನಾನು ಇಂಡಿಯಾ ದಿಂದ ಕೆನಡಾ ದ ಲ್ಲಿ ಮಗನ ಮನೆಗೆ ಓಡಾಡು ವುದು ಸರ್ವೇ ಸಾಮಾನ್ಯ. ಹೀಗೆ ಬರ್ತಿದ್ದ ನನಗೆ ಇಲ್ಲಿಯೂ ಸ್ನೇಹಿತರು ಇದ್ದರು,ಕೆಲವು ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲೂ ಸೇರಿದ್ದೆ. ಹೀಗೆ ಒಂದು ದಿನ ಮೆಸೇಜ್ ನೋಡುತ್ತಾ ಇದ್ದಾಗ ಒಂದು ಮೆಸೇಜ್ ನನ್ನನ್ನು ಆಕರ್ಷಿಸಿತು.ಏನಿರಬಹುದು ಎಂದು ಮೆಸೇಜ್ ಹಾಕಿದವರಿಗೆ ಕಾಲ್ ಮಾಡಿದೆ.ಆ ಕಡೆ ಇಂದ ಕಾರ್ತಿಕ್ ಕುಂದೂರು ಎನ್ನುವವರು ಮಾತಾಡುತ್ತಾ ಪ್ರಕಾಸಂಸ್ ಸಂಸ್ತೆ ಇಂದ ಬಿ.ಎಂ. ಟಿ.ಸಿ. theater workshop ಮಾಡುತ್ತಾರೆ ಚೆನ್ನಾಗಿರುತ್ತೆ ಎಂದು ವಿಷದ ವಾಗಿ ಹೇಳಿ ನೀವು ಸೇರಿಕೊಳ್ಳಿ ಎಂದರು.ಇದು ಆನ್ಲೈನ್ ವೀಕೆಂಡ್ಸ್ ನಲ್ಲಿ ಇರುತ್ತೆ ಇಂಡಿಯಾ ದಿಂದ ಎಂದರು.ಅಲ್ಲಿಯೇ ಇದ್ದ ನನಗೆ ಈ ಬಗ್ಗೆ ತಿಳಿದಿರಲಿಲ್ಲವಲ್ಲ ಎನಿಸಿತು.ಆದರೂ ಚಿತ್ರಿಕರಣ ,ಅಭಿನಯ,ಕ್ಯಾಮೆರಾ,ಬರೆಯುವುದು ಎಲ್ಲಾ ಇಷ್ಟವಿದ್ದ ನನಗೆ ಕುತೂಹಲ ವಾಗಿ 20 ಡಾಲರ್ ಫೀಸ್ಕೊಟ್ಟು ಸೇರಿದೆ .ನನ್ನ ಸ್ನೇಹಿತರೊಡನೆ ಮಾತಾಡಿ ಅವರನ್ನು ಸೇರಿಸಿದೆ. ಸೆಪ್ಟೆಂಬರ್ 19ಕ್ಕೆ, ಕ್ಲಾಸ್ ಶುರುವಾಯ್ತು.ಮೊದಲ ಕ್ಲಾಸ್ ಎಲ್ಲರ ಪರಿಚಯದಲ್ಲೆ ಮುಗಿಯಿತು. workshop ನ administrator ಆಗಿದ್ದ P.D. ಸತೀಶ್ ರವರು mentors gala ಪರಿಚಯವನ್ನು ನಮಗೂ, ನಮ್ಮ ಪರಿಚಯವನ್ನೂ mentorsಗಳಿಗೂ ಮಾಡಿಸಿದರು. ಒಟ್ಟು 26 ಕ್ಲಾಸ್ ಗಳನ್ನು ಅಟೆಂಡ್ ಮಾಡಿದೆವು. ಇರಲಿ, ಮೊದಲು ಸೆಪ್ಟೆಂಬರ್ 26 ರಂದು ಕೃಷ್ಣಹೆಬ್ಬಾಳೆ ಅವರು ತಿಯರಿ ಡಿಸೈನ್ ಬಗ್ಗೆ ಹೇಳಿಕೊಟ್ಟರು  ಎಷ್ಟು ಚೆನ್ನಾಗಿ ನಗುತ್ತಾ ಮಾತಾಡಿದ ಅವರ ಕ್ಲಾಸ್ ಎಲ್ಲರ ಮೆಚ್ಚುಗೆ ಪಡೆಯಿತು. 27ರಂದು ಚಂದನ್ ಅವರು ಸ್ಟೋರಿ ಬಗ್ಗೆ ಲೆಕ್ಚರ್ ಕೊಟ್ಟರು. ಹೇಗೆಲ್ಲಾ  ಕಥೆ ಬೆಳೆಸಬಹುದು, ಬರೆಯ ಬಹುದು, ಕಲ್ಪಿತಕಥೆ ಗಳು ಹೇಗೆ ಹುಟ್ಟುತ್ತವೆ ಇತ್ಯಾದಿ... ಮೊದಲೇ ಕಥೆ ಬರೆಯುವ ಆಸೆ ಇದ್ದ ನನಗೆ ಬಹಳ ಉಪಯುಕ್ತವಾಯ್ತು.

ಅಕ್ಟೋಬರ್ 3 ರಂದು ನಿಖಿಲ್ ರವರು music ಬಗ್ಗೆ ಹೇಳುತ್ತಾ ಹೋದರು. ಯಾವುದೇ ಸಂಗೀತವು ಇನ್ಸ್ಟ್ರುಮೆಂಟ್ಸ್ ಇಲ್ಲದೆ ಹೇಗೆ ಕಂಗೊಳಿಸಲಾರದು,ಕಥೆಗೆ ಸಂಭ ದಿತ ವಾಗಿ ಹೇಗೆ ಸಂಗೀತ ರಚನೆ ಮಾಡಬೇಕು ಇತ್ಯಾದಿ... ಇದೂ ತುಂಬಾ ಇಷ್ಟವಾದ ಕ್ಲಾಸ್ ಆಗಿತ್ತು. ಅಕ್ಟೋಬರ್ 4 ಹಾಗೂ 10 ರಂದು ಚಂದನ್ ರವರು ಸಂಭಾಷಣೆ ಬರೆಯುವುದನ್ನು, ಸ್ಕ್ರೀನ್ ನಲ್ಲಿ ಹೇಗೆ ಉಪಯೋಗಿಸ ಬೇಕು ಎಂಬುದನ್ನು ವಿಷದ ವಾಗಿ ಹೇಳಿಕೊಟ್ಟರು. ಅಕ್ಟೋಬರ್ 11 ಅಂದು ವೀಣಾ ಸುಂದರ್ ರವರು ಅಭಿನಯದಲ್ಲಿ ನಡಿಗೆಯ, ತಲೆ, ಕೈ, ಬಾಯಿ ತಿರುಗಿಸುವುದು ಒಟ್ಟಾರೆ body language ಬಗ್ಗೆ ಪರಿಚಯಿಸಿದರು. ತುಂಬಾ ನಕ್ಕೆವು ಅಂದು.ಅಕ್ಟೋಬರ್ 17,18 ರಂದು ಚಂದನ್ ರವರ ಸ್ಕ್ರಿಪ್ಟ್ ಅಂಡ್ ಸ್ಕ್ರೀನ್ ಪ್ಲೇ ಕ್ಲಾಸ್ continue ಆಗಿ ನಮ್ಮೆಲ್ಲರ ಕೈಲಿ script ಬರೆಸಿದರು.ಒಬ್ಬೊಬ್ಬರು ಒಂದೊಂದು ರೀತಿ ಬರೆದು ಓದಿ ಚೆನ್ನಾಗಿ ನಕ್ಕೆವು.ಅಕ್ಟೋಬರ್ 24 ರಂದು ಶ್ರೀಹರಿ ಅವರು ಒಂದು ನಾಟಕ,ಸ್ಕಿಟ್ ಏನೇ ಮಾಡಬೇಕಾದರೂ ಅದಕ್ಕೆ ತಕ್ಕಂತ ಉಪಕರಣಗಳು, ಅದನ್ನು ಉಪಯೋಗಿಸುವ ರೀತಿಯ ಬಗ್ಗೆ ಕಳಿಸಿದರು.ಹೌದು ಇದು ಬಹಳ ಮುಖ್ಯವಾದ ಸಂಗತಿ. ಏಕೆಂದರೆ ಹಲವಾರು ಸಲ ಪ್ರಾಪರ್ಟೀಸ್ ಗಳೇ ಕಥೆಯನ್ನು ಹೇಳುತ್ತಾ ಸ್ಪಷ್ಟ ಪಡಿಸುತ್ತದೆ .ಮಾತಲ್ಲಿ ಹೇಳಲಾಗದ ಎಷ್ಟೋ ಸಂಭಾಷಣೆ ಇದರ ಮುಖಾಂತರವೇ ಅರಿವಾಗುತ್ತದೆ. ಅಕ್ಟೋಬರ್ 25ರಂದು ಸುಜಯ್ ಶಾಸ್ತ್ರಿ ಅವರು ವಾಯ್ಸ್ ಸೆಷನ್ ತೆಗೆದುಕೊಂಡರು.ಯಾವ dialogue ಹೇಳುವಾಗ ನಮ್ಮ ದ್ವನಿ ಹೀಗೆಲ್ಲ ಬದಲಾಗಬೇಕು ಎಂಬುದರ ನಿರೂಪಣೆ ತುಂಬಾ ಸುಂದರ ವಾಗಿತ್ತು.ನಾವು ಅಭಿನಯಿಸಿ ತೋರಿಸಿ ಖುಷಿ ಪಟ್ಟೆವು..ಅಕ್ಟೋಬರ್ 31 ರಂದು PD Satish ಅವರು ಟೆಕ್ನಿಕಲ್ ಆಗಿ ಮಾಡುವ ವಿಧಾನ ವನ್ನು ಹೆಚ್ಚಾಗೆ ವಿವರಿಸಿದರು.ಸ್ವಲ್ಪ ಸ್ವಲ್ಪ ಅರ್ಥ ವಾಯ್ತು ನನಗೆ.

ನವೆಂಬರ್ 1 ರಂದು ಸಿಹಿ ಕಹಿ ಚಂದ್ರು ಅವರು ಒಬ್ಬ ನಟ ಅಥವಾ ನಟಿ ಯ ಅಭಿನಯದ ಬಗ್ಗೆ,ಹಾಗೂ ದೊಡ್ಡ ದೊಡ್ಡ ಸಂಭಾಷಣೆ ಗಳನ್ನು ಬಾಯಿಪಾಠ ಮಾಡದೆ, ಸಂಭಾಷಣೆ ಕಾರ ಬರೆದ ಪದಗಳನ್ನು ಬದಲಾಯಿಸದೆ ಹೇಗೆ ಹೇಳಬೇಕು ಎಂದು ತುಂಬಾ ಚೆನ್ನಾಗಿ ಹೇಳಿಕೊಟ್ಟರು.ನಮಗೆ ಇನ್ನೂ ಹೆಚ್ಚಿನ ಅರ್ಥ ವಾಗುವಂತೆ ನಮ್ಮ ಬಳಿಯೂ ಹೇಳಿಸಿದರು.ಇದು ಒಂದು ಥರ ಚಾಲೆಂಜಿಂಗ್ ಆಗಿತ್ತು.November 7ರಂದು ನಿಖಿಲ್ ರವರು ಸಂಗೀತ ಸಂಯೋಜನೆಯ ಬಗ್ಗೆ ವಿಷದ ವಾಗಿ ವಿವರಿಸಿ,ಭಾವ ತುಂಬಿದ ಹಿನ್ನಲೆ ಸಂಗೀತ ಎಷ್ಟು ಮುಖ್ಯ ಎಂದು ಹೇಳಿಕೊಟ್ಟರು. ನಮಗೆ ಎಲ್ಲರಿಗೂ ಡೋಲು ಮುಂತಾದ ಶಬ್ದ ಗಳನ್ನು ನಮ್ಮ ಸ್ವಂತದ್ದು ಮಾಡುವಂತೆ ಹೋಂವರ್ಕ್ ಕೊಟ್ಟರು.ಒಬ್ಬೊಬ್ಬರು ಒಂದೊಂದು ಥರ ಟೇಬಲ್ ಕುಟ್ಟುವ ಶಬ್ದ,ಸರ ಸರ ಬಟ್ಟೆ ಎಳೆಯುವ ಶಬ್ಧ,ಮೆಲ್ಲಗೆ ಜೋರಾಗಿ ಚಿಟಿಕೆ ಹಾಕುವ ಶಬ್ದ,ಶಿಳ್ಳೆ ಹೊಡೆಯುವ ಶಬ್ದ,ನೀರು ಚೆಲ್ಲುವ ತುಂಬುವ ವಿವಿಧ ಶಬ್ದ.....ಹೀಗೆಲ್ಲ ರೆಕಾರ್ಡ್ ಮಾಡಿ ತಂದು ತೋರಿಸಿದಾಗ ಮರೆಯಲ್ಲಿ ನಿಖಿಲ್ ಅದೆಷ್ಟು ನಕ್ಕರೋ,ತಲೆ ಚೆಚ್ಚಿ ಕೊಂಡರೋ ನನಗಂತೂ ಗೊತ್ತಿಲ್ಲ.ನಾವೆಲ್ಲ ಅಂತೂ ಹೊಟ್ಟೆ ಹುಣ್ಣಾಗುವ ಹಾಗೆ ನಕ್ಕೆವು.ಖುಷಿ ಇಂದ ಒಬ್ಬರನ್ನು ಒಬ್ಬರು ಉತ್ತೇಜಿಸಿ ಕೊಂಡೆವು. ನವೆಂಬರ್ 8,14 ರಂದು ಕೃಷ್ಣ ಹೆಬ್ಬಾಳೆ ಯವರು ಅಭಿನಯ ತರಬೇತಿ ನೀಡಿ, ನಮ್ಮೆಲರ ಬಳಿ ವಿಷಯ ಕೊಟ್ಟು ಒಂದೊಂದು ನಿಮಿಷ ಅಭಿನಯಿಸಲು ಹೇಳಿದರು.ಎಲ್ಲರೂ ಪರ್ವಾಗಿಲ್ಲ ಅನ್ನುವ ಹಾಗೆ ಅಭಿನಯಿಸಿದೆವು. ತಪ್ಪಡಾಗ ತಿದ್ದಿದರು ಕೂಡ.ವಾಹ್! ಇದು ನನಗೆ ತುಂಬಾ ಇಷ್ಟವಾದ ಕ್ಲಾಸ್ ಆಗಿತ್ತು .ಎಲ್ಲರೂ ನಟನೆ ಯಲ್ಲಿ ಪರಿಣಿತ ರಾಗಿದ್ದು ಇದಕ್ಕೆ ಕೃಷ್ಣ ರವರೆ ವಾವ್! ಎಂದಿದ್ದು ಸಾಕ್ಷಿ.

ನವೆಂಬರ್ 15ರಂದು ನಿಖಿಲ್ ಅವರು,ಒಂದು ಸಿನೆಮಾ ಅಥವಾ ಡ್ರಾಮಾ ಮಾಡಲು music ಹೇಗೆ ಇರಬೇಕು ಎಂಬುದನ್ನು ಬಹಳ ಆಳವಾಗಿ ತಿಳಿಸಿದರು.ನನಗೆ ಅಲ್ಪ ಸ್ವಲ್ಪ ಅರ್ಥವಾಯ್ತು.ಇವೆಲ್ಲದರ ಮಧ್ಯೆ ನಾವು ಕಲಿತಿದ್ದನ್ನು ಅಂದರೆ,ನಾವು 11 ಜನರಿದ್ದೇವಲ್ಲ. ಓಹ್ ಮರೆತೇ ನೋಡಿ ಕಾರ್ತಿಕ್ ಕುಂದೂರು,ರವೀಂದ್ರ ಕುಮಾರ್, ಭರತ್,ಉಷಾ ರಾಜಶೇಕರ್,ಆಶ,ಸ್ವಾತಿ ಉಮೇಶ್, ದೀಪಿಕ, ನೀತ ಅನಿಲಕುಮಾರ, ಆದಿತ್ಯ ಪ್ಯಾಡಿ ಹಾಗೂ ಶ್ರೀರಂಗಮಣಿ ನಾವು 11 ಜನ ಸೇರಿ ಕಲಿತಿದ್ದನ್ನು ಉಪಯೋಗಿಸಿ ಒಂದು ಚಿಕ್ಕ ಸಿನಿಮಾ ತೆಗೆಯಲು ಅರ್ಧ ಕ್ಲಾಸ್ ನಲ್ಲೇ ತೀರ್ಮಾನ ತೆಗೆದು ಕೊಂಡಿದ್ದೆವು. ಪಿಡಿ ಸತೀಶ್ ರವರು  ತೀರ್ಮಾನಕ್ಕೆ ತಕ್ಕಂತೆ ನಾವ್ಗಳು ಬರೆದು ಕೊಟ್ಟಿದ್ದ ಕಥೆಗೆ ಹೊಸ ರೂಪ ಕೊಟ್ಟು ಆ ಕಥೆಯನ್ನು ಸಂಭಾಷಣೆಯ ರೂಪದಲ್ಲಿ ಚಂದನ್ ರವರ ಕೈಲಿ ರೆಡಿ ಮಾಡಿಸಿದರು.ಈಗ ಪಾತ್ರ ಗಳ ಹಂಚಿಕೆ ಯಾಗ ಬೇಕಿತ್ತು. ಕ್ಲಾಸ್ ನಲ್ಲಿ ಎಷ್ಟು ಜನ ಯಾವುದರಲ್ಲಿ ಆಸಕ್ತಿ ತೋರಿಸಿದ್ದರು,ಅಲ್ಲದೆ ವಯೋ ಧರ್ಮಕ್ಕೆ ಅನುಗುಣವಾಗು ಪಾತ್ರ ಗಳ ಹಂಚಿಕೆ ಮಾಡಿದರು.ಜೊತೆಗೆ ಕ್ಯಾಮೆರಾ,ಲೊಕೇಶನ್,ಲೈಟ್, ಮೇಕಪ್,ಉಡಿಗೆ ತೊಡಿಗೆ,ಶೂಟಿಂಗ್ ಸಮಯದಲ್ಲಿ ಊಟಾ ,ಕಾಫಿ ತಿಂಡಿ ಯ ಜವಾಬ್ದಾರಿ ಇತ್ಯಾದಿ ಗಳನ್ನು ಅವರವ ಕಲಿಕೆಗೆ ಸರಿಯಾಗಿ ಹಂಚಲಾಯಿತು.ನನಗೆ ನಾಯಕಿ ಯ ಪಾತ್ರ ದೊರೆತು ತುಂಬಾ ಖುಷಿ ಆಯಿತು.ಇನ್ನೂ ಸಿನಿಮಾಗೆ ಒಂದು ಹೆಸರು ಇಡಬೇಕಲ್ಲ,ಇದು ಅನಿವಾರ್ಯ ವಲ್ಲವೇ? ಅಲ್ಲೇ ಸಿಕ್ಕಿತು ನೀವಾರ್ಯ. ಎಲ್ಲರಿಗೂ ಇದು ಒಪ್ಪಿಗೆ ಆಯ್ತು.ನಿವಾರ್ಯ ಜನನ ವಾಯ್ತ. Srirangamani - ಮಾಯ, ಕಾರ್ತಿಕ್ -ಕಬೀರ್,ರವಿಂದ್ರ - ಅಮರ್, ಭರತ್ - ರಾಜಶೇಖರ್,ಉಷಾ - ನಿರ್ಮಿತ, ಆಶ - ಸರಿತಾ, ಸ್ವಾತಿ - ಸಾರ, ದೀಪಿಕ - ನಿಶಾ, ನೀತ - ಪ್ರೀತಿ,ಆದಿತ್ಯ - ಭುವನ್.... ಹೀಗೆ ಎಲ್ಲರಿಗೂ ಪಾತ್ರ ಹಂಚಿಕೆ ಆಯ್ತು.ಖುಷಿ ಯೂ ಆಯ್ತು.ಇನ್ನೂ ಪ್ರಾಕ್ಟೀಸ್ ಆಗಿ ಶೂಟಿಂಗ್ ಆಗಬೇಕಲ್ಲ.ಶೂಟಿಂಗ್ ಸಮಯ ಮುಂದೂಡುತ್ತಾ ಹೋಯ್ತು.ಕಾರಣ ಎಲ್ಲರಿಗೂ ತಿಳಿದಿರುವಂತೆ ಕರೋನ ಆಕ್ರಮಿಸಿ ಕೊಂಡoತೆಲ್ಲ ಮುಖ ತಹ ಬೇಟಿ ಯಾಗದೆ ಪ್ರಾಕ್ಟೀಸ್ ಮಾಡಲಾಗದೆ ಶೂಟಿಂಗ್ ಅಟೆಂಡ್ ಮಾಡಲಾಗದೆ ಎಲ್ಲಾ ಮುಂದಕ್ಕೆ ಹೋಯ್ತು.ಈ ಮದ್ಯೆ ನಾನು ಇಂಡಿಯಾ ಗೆ ಮರಳ ಬೇಕಾಯ್ತು.ನನಗೂ ಶೂಟಿಂಗ್ ಮುಗಿಸಿದೆ ಹೊರಟಿದ್ದು ಬೇಸರ ವಾಗಿತ್ತು.

ನಿಜ ಹೇಳಬೇಕೆಂದರೆ ಪಿಡಿ ಸತೀಶ್ ಕಾರ್ತಿಕ್ ಇಬ್ಬರೂ ಒತ್ತಾಸೆ ಯಾಗಿ ನಿಂತರು.ಇದ್ದ ಒಂದೇ ಸಂಭಾಷಣೆ ಯನ್ನು ಸ್ವಲ್ಪ ಬದಲಾಯಿಸಿ 3 ಸಂಭಾಷಣೆ ಮಾಡಿಸಿದರು.ಎಲ್ಲವನ್ನೂ ಇಂಡಿಯಾ ದಿಂದಲೇ ಫೋನ್ ಕಾಲ್ ನಲ್ಲಿ ಮಾತಾಡು ವಂತೆ ಮಾಡಿದರು.ಈಗ ನಾನು ಇದಕ್ಕಾಗಿ ಹೆಮ್ಮೆ ಪಡುತ್ತೇನೆ.6,7 ಕ್ಲಾಸ್ ಗಳಲ್ಲಿ ರಿಹರ್ಸಲ್ ನಡೆದು ಜನವರಿ 6 ರಂದು ನಮ್ಮ ಕ್ಲಾಸ್ ಮುಗಿದು ಶೂಟಿಂಗ್ ಅಷ್ಟೇ ಇದ್ದು ಅದರ ಸಮಯ ಕ್ಕಾಗಿ, ಕರೋನ ನಿರ್ಮೂಲನೆ ಗಾಗಿ ಕಾಯುತ್ತ ಕುಳಿತೆವು .

ಕೆನಡಾ ದಲ್ಲಿ ಆಗಸ್ಟ್ 7 2021 ರಂದು ಎಲ್ಲ ಸ್ಟೂಡೆಂಟ್ಸ್ ಗಳ ಪರಿಶ್ರಮ ದೊಂದಿಗೆ ಮುಖತಃ ರಿಹರ್ಸಲ್ ಹಾಗೂ ಶೂಟಿಂಗ್ ಶುರುವಾಯ್ತು.ಎಲ್ಲರ ಸಹಕಾರ ಹಾಗೂ ಕೆಲವರ ಸಹಾಯ ಹಸ್ತ ದೊಂದಿಗೆ ಕಾರ್ತಿಕ ಮುಂದಾಳತ್ವ ದಲ್ಲಿ ಅದ್ಧೂರಿಯ ಚಿತ್ರೀಕರಣ ನಡೆದು ಎಲ್ಲರೂ ಎಂಜಾಯ್ ಮಾಡಿದರು.ನನಗೆ ಎಲ್ಲಾ ವನ್ನೂ ಮೆಸೇಜ್ ಮಾಡಿ ತಿಳಿಸುತ್ತಾ ಇದ್ದರು.ಇಲ್ಲಿಯ ಚಿತ್ರಿಕರಣ ವೇನೋ ಮುಗಿಯಿತು.ಇನ್ನೂ ಇಂಡಿಯಾ ದಲ್ಲಿ ಬಾಕಿ ಇತ್ತು.ಸಿಹಿ ಕಹಿ ಚಂದ್ರು ಅವರು  ಜೆಡಿ ಪಾತ್ರ,ಸೋನು ಗೌಡ ಅವರು ಸಂಜನಾ ಪಾತ್ರ,ಕೃಷ್ಣ ಹೆಬ್ಬಾಳೆ ಅವರು ಕೃಷ್ಣರಾಜ ಕ್ರಿಸ್ಟೋಫರ್ ಪಾತ್ರ ದಲ್ಲಿ ಅಭಿನಯಿಸಲು ಎಲ್ಲಾ ಸಿದ್ಧತೆ ಗಳು ನಡೆದು ಅವರ ಜೊತೆ ಯಲ್ಲೆ ನನ್ನ ಮಾಯ ಪಾತ್ರವೂ ಅಲ್ಲಿಯೇ ಚಿತ್ರೀಕರಿಸಲಾಯ್ತು.ಕಾರ್ತಿಕ್ ಜೊತೆಗೆ ಮಿಕ್ಕೆಲ್ಲ ಪಾತ್ರ ಗಳ ಚಿತ್ರೀಕರಣ ಮುಗಿಸಿ,ಸಂಕಲನ,music mikka ಕೆಲಸಗಳು ಉಳಿಯಿತು.ಅಬ್ಭಾ ಒಂದು ಚಿಕ್ಕ ಚಿತ್ರ ತಯಾರಿಸಲು ಏನೇನೆಲ್ಲಾ ತಯಾರಿ,ಎಷ್ಟು ಕರ್ಚು,ಎಷ್ಟು ಜನರ ಸಹಾಯ ಬೇಕೆಂಬುದನ್ನು ಕಣ್ಣಾರೆ ನೋಡಿದ ನನಗೆ ತುಂಬಾ ಆಶ್ಚರ್ಯ ವೂ ಆಯ್ತು.ಒಂದು ಸಂತಸದ ವಿಷಯ ವೆಂದರೆ ಕೆನಡಾ ದಲ್ಲಿ ಚಿತ್ರಮಂದಿರ ಗಳಲ್ಲಿ ವಿಕ್ರಾಂತ್ ರೋಣ,ಗಾಳಿಪಟ 2 ಚಿತ್ರ ಗಳ ಜೊತೆ nivaarya ಟ್ರೇಲರ್ ಬಿಡುಗಡೆ ಆಗಿದ್ದು.ಹಾಗೂ ವಿಜಯ ಪ್ರಕಾಶ್,ರಾಜೇಶ್ ಕೃಷ್ಣನ್ ರವರ ಸಂಗೀತ ರಸಸಂಜೆ ಕಾರ್ಯಕ್ರಮ ದಲ್ಲೂ ಟ್ರೇಲರ್ ಬಿಡುಗಡೆ ಆಗಿದ್ದು ಸಂತಸದ ವಿಷಯ.ಚಿತ್ರೀಕರಣಕ್ಕೆ ಸಿದ್ಧವಾಗಲು ಪ್ರತ್ಯಕ್ಷ ವಾಗಿ ಪರೋಕ್ಷ ವಾಗಿ ಸಹಾಯ ಮಾಡಿದ ಎಲ್ಲರಿಗೂ ಮುಖ್ಯ ವಾಗಿ ಹಣದ ಸಹಾಯ ಮಾಡಿದ Mr. Vinod Melvin D'Souza, Mr abhinandan chandrappa ,Mysore studio house,Sandesh Vijay devaraj,Dr.shoba rajanna,Mr.vijaykumar hirenarti,Mr Kiran agrahara,Mrs.keertana kartik

Office location Olampic Tool and Die, CEO Dr.Anurag sinha,

Haagu Sardarji Grill and Chill

ಇವರನ್ನು ನೇನೆಯಲೇ ಬೇಕು ವಂದನೆಗಳೊಂದಿಗೆ.

ಈಗ  ನಿವಾರ್ಯಾ ಬಿಡುಗಡೆಗೆ ಸಿದ್ದವಾಗಿದೆ.ಬಿಡುಗಡೆಯ ದಿನ ನೀವೆಲ್ಲರೂ ಬಂದು ನೋಡಿ ಹರಸಿ ಹಾರೈಸಿ.

ಶ್ರೀರಂಗಮಣಿ .

Comments

Popular posts from this blog

Prakasam Productions

 . ಕಲಾ ಕೃಷಿ - Agriculture of Culture ಕಲಾ ಕೃಷಿ Kalaa Krushi, all the Performing Arts activities we do for Pradarshana Kalaa Samsthe (Prakasam).  This page is the index of all our endeavors.  We would appreciate your Feedback on our activities and request you to support our endeavors. Check out our dedicated & selfless Team , Activities & Join Hands with us for Kala Krushi.  If you are interested in joining us here is the WHATSAPP COMMUNITY LINK or mail us at prakasamtrust@gmail.com  Four our past & current events list CLICK HERE Productions List: Home Theatre Toyota Road Awareness Program Jalpa Sanamathe Kathakhanda Sathya Nithya Isila Road awareness skit for Toyota   Varalakshmi Avaantara Caronammana Krupe Meenina Hejje Nivaarya Sahana Murthy Mahapeede Mahablu Masthi Kallu Namma Nimmolagobba Mr. Shambho Shiva Shankara Bhava Navanaveena Avalavanu Avanavalu Gulle Nari Ugalageete Bogie Katha Sangama Sairandhri Vaave Kattalu* Yaksha* Rayakota...

Meghashree's Profile

Contact: 7259998222/333 or mail prakasamtrust@gmail.com Meghashree hails from a family of Legendary Theatre and Motion Picture Personalities. She possess Diploma in Fashion Technology from Rajiv Gandhi Memorial Polytechnic. Blessed as the Grand daughter of Sri. C. Honnappa Bhagavathar - a stalwart in the motion pictures of Kannada Cinema, who was also renowned as the '' Gaana Kala Bhushana '' in Tamil and Kannada. He is bestowed with the Karnataka Nataka Academy Awards, Gold medals for his extraordinary talent as a great musician and for his splendid style of  ''Harikatha''. His name is synonymously with the splendid folk art / music which is now moving into the oblivion. Professional Details : Theatre : Active member of Benaka and Pra.Ka.Sam theatre  troupes. Plays Performed are Gokula Nirgamana, Jokumaraswamy, Katthale Belaku, Hayavadhana, Hosabelaku, Katha Sangama, Chandrahasa, Kaakana Kote, Pramilarjuneeyam, Bogie...... T.V Serials...

Intern with Prakasam

Logo If you are keen to do theatre, want to be a Thespian from a Topophobian? want to do something to break the monotony of life? Come and join us as a  Production Intern .  Fill in THIS FORM  & let us know your intent to join Prakasam. The Production Intern Program offers you the opportunity to work alongside professional artists and managers at the forefront of an award-winning regional not-for-profit theatre group.  Please note that during the production internship two days absence is accepted, a third day if the reason is genuine.  If you can not attend more than three day's then it would be difficult for us to spend time with you and also on our production.  Kindly stick to the day's and times mentioned for the production.  This is what would define your interest and commitment the two basic characters we look at as a team and which is primary to any theatre production. Potluck Face of the Team :) Read on the FAQ's for further...