“ಜಲ್ಪ"ದ ಸಂಗೀತ (Link to Music)
“ಜಲ್ಪ" ನಾಟಕ ಶ್ರೀ ತೇಜಸ್ ಗೌಡ .ಕೆ . ಅವರ ರಚನೆಯಾಗಿದ್ದು, ಪಿ .ಡೀ .ಸತೀಶ್ಚಂದ್ರ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಈ ನಾಟಕಕ್ಕೆ ಸಂಗೀತ ಸಂಯೋಜನೆ ಮಾಡುವಾಗ, ಅದರ ಕಥೆಯ ಭಾವವನ್ನು ಪ್ರತಿಧ್ವನಿಸುವಂತಹ ರಾಗಗಳನ್ನು ಬಳಸಿದ್ದೇವೆ
ಈ ನಾಟಕವು ವಿಷಣ್ಣತೆಯ ಛಾಯೆಯಲ್ಲಿ ಆರಂಭವಾಗುವುದರಿಂದ, ಇಲ್ಲಿ ನಾನು ಲಲಿತ್ ರಾಗವನ್ನು
ಪ್ರಯೋಗಿಸಿದ್ದೇನೆ. ಇದು ಮುಂಜಾನೆಯ ರಾಗವಾಗಿದ್ದು,
ಕತ್ತಲೆಯಿಂದ ಬೆಳಕಿನೆಡೆಗೆ ನಡೆಯುವ ಪ್ರಕೃತಿಯ ಪರ್ವಕಾಲದ ಸೂಕ್ಷ್ಮ ಭಾವನೆಗಳನ್ನು ಬಿಂಬಿಸುತ್ತದೆ. ಈ ರಾಗವು ಮೇಲ್ನೋಟಕ್ಕೆ
ಶಾಂತ, ಗಂಭೀರ ಹಾಗು ಭಕ್ತಿರಸಗಳಿಂದ ಕೂಡಿದ್ದರು,
ಇದರಲ್ಲಿ ಕರುಣಾ ತವಕ ಹಾಗು ಬೀಭತ್ಸ
ರಸಗಳು ಅನುಭವಕ್ಕೆ ಬರುತ್ತದೆ.
ಲಲಿತ್
ರಾಗವು, ನಾಟಕದ ಸನ್ನಿವೇಶ ನಾಯಕನ ಮನಸ್ಥಿತಿ ಹಾಗು ಕಥೆಯ ಆಂತರ್ಯದಲ್ಲಿರುವ
ಸೂಕ್ಷ್ಮ ವಿಷಯಗಳ ಸಂವೇದನೆಯನ್ನು ನಿಭಾಯಿಸುವುದಲ್ಲದೆ, ಪಾತ್ರಗಳ ಪ್ರಭಾವವನ್ನು ಸಹ ಹೆಚ್ಚಿಸುತ್ತದೆ
ನಾಟಕದ
ಅಂತ್ಯದಲ್ಲಿ ಗೋರಕ್ ಕಲ್ಯಾಣ್ ರಾಗದ ಬಳಕೆಯಾಗಿದ್ದು, ಇದು
ಮಧುರ, ಸಂತೃಪ್ತ ಹಾಗು ನೆಮ್ಮದಿಯ ಅನುಭವನ್ನು
ವ್ಯಕ್ತ ಪಡಿಸುತ್ತದೆ. ಕಥೆಯ ಅಂತ್ಯದಲ್ಲಿ ಪಾತ್ರಗಳ
ಮನಸ್ಸು, ಕೋಪ, ದುಃಖ ಮನಸ್ತಾಪಗಳಿಂದ
ಹೊರಬಂದು ತಿಳಿಯಾಗಿ, ಸುಖಾಂತ್ಯವನ್ನು ಕಾಣುತ್ತದೆ. ಗೋರಕ್ ಕಲ್ಯಾಣ್ ರಾಗವು, ನಾಟಕದ ತೀವ್ರತೆಗೂ ಸಮತೋಲನವನ್ನು ತರಲು ನೆರವಾಗುತ್ತದೆ.
ಈ ರಾಗಗಳ ಬಳಕೆ ಕಥೆಯ ಭಾವನಾತ್ಮಕ
ತೀವ್ರತೆಯನ್ನು ಉತ್ಕಟಕ್ಕೇರಿಸುವುದಲ್ಲದೆ, ಪ್ರೇಕ್ಷಕರಿಗೆ ಆಳವಾದ ಅನುಭವವನ್ನು ನೀಡುತದೆ ಎಂದು ನಂಬಿದ್ದೇನೆ.
ರಂಜಿತಾ
Comments
Post a Comment